Publish Date: Mon, 18 Oct 2021 (17:31 IST)
Updated Date: Mon, 18 Oct 2021 (17:33 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಿರಿಯ ನಟ-ನಟಿಯರನ್ನು ಗೌರವದಿಂದ ಕಾಣುತ್ತಾರೆ. ಇದೀಗ ಹಿರಿಯ ನಟಿ ಸರೋಜಾದೇವಿ ಮನೆಗೆ ಭೇಟಿ ಕೊಟ್ಟು ಕೆಲ ಕಾಲ ಕಳೆದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭಾನುವಾರ ನಟಿ ಸರೋಜಾದೇವಿ ಮನೆಗೆ ಭೇಟಿ ಕೊಟ್ಟ ದರ್ಶನ್ ಅವರನ್ನು ಮತ್ತು ಕುಟುಂಬಸ್ಥರನ್ನು ಮಾತನಾಡಿಸಿಕೊಂಡು ಕೆಲವು ಕಾಲ ಖುಷಿಯಾಗಿ ಕಳೆದಿದ್ದಾರೆ.
ಸರೋಜಾದೇವಿಯವರ ಮೇಲೆ ವಿಶೇಷ ಪ್ರೀತಿ ಇಟ್ಟುಕೊಂಡಿರುವ ದರ್ಶನ್ ಈಗ ಅದೇ ಗೌರವದಿಂದ ಹಿರಿಯ ನಟಿಯ ಮನೆಗೆ ಭೇಟಿ ಕೊಟ್ಟು ಆರೋಗ್ಯ ವಿಚಾರಿಸಿದ್ದಾರೆ.