Publish Date: Sun, 17 Oct 2021 (17:31 IST)
Updated Date: Sun, 17 Oct 2021 (17:32 IST)
ಬೆಂಗಳೂರು: ಚಿರಂಜೀವಿ ಸರ್ಜಾ ಹುಟ್ಟುಹಬ್ಬದ ದಿನ ಹೊಸ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ ನಟಿ ಮೇಘನಾ ರಾಜ್ ಇದರ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದ್ದಾರೆ.
ಚಿರು ಸರ್ಜಾ ಅಗಲಿದ ಬಳಿಕ ಮಗ ರಾಯನ್ ಆರೈಕೆಯಲ್ಲೇ ಕಾಲ ಕಳೆದಿದ್ದ ಮೇಘನಾ ಚಿತ್ರರಂಗದಿಂದ ದೂರವೇ ಉಳಿದಿದ್ದರು. ಆದರೆ ಈಗ ಮತ್ತೆ ಬಣ್ಣ ಹಚ್ಚುವ ನಿರ್ಧಾರ ಮಾಡಿದ್ದಾರೆ. ಇದಕ್ಕೆ ಕಾರಣ ಸ್ನೇಹಿತ ಪನ್ನಗ ಎಂದು ಮೇಘನಾ ಹೇಳಿದ್ದಾರೆ.
ಇದು ಚಿರು ಮತ್ತು ನನ್ನ ಕನಸಿನ ಸಿನಿಮಾ. ಬಹುಶಃ ಬೇರೆ ಯಾರೇ ಆಗಿದ್ದರೂ ನಾನು ಈ ಸಿನಿಮಾ ಒಪ್ಪಿಕೊಳ್ಳುತ್ತಿರಲಿಲ್ಲ. ಪನ್ನಗ ಮಾಡುತ್ತಿದ್ದಾನೆ ಎಂಬ ಕಾರಣಕ್ಕೆ ಮತ್ತೆ ಬಣ್ಣ ಹಚ್ಚಲು ನಿರ್ಧರಿಸಿದ್ದೇನೆ. ಮತ್ತೆ ಕ್ಯಾಮರಾ, ರೋಲಿಂಗ್, ಆಕ್ಷನ್ ಶುರುವಾಗಲಿದೆ ಎಂದು ಮೇಘನಾ ಹೇಳಿಕೊಂಡಿದ್ದಾರೆ.