Select Your Language

Notifications

webdunia
webdunia
webdunia
webdunia

ಸ್ಯಾಂಡಲ್ ವುಡ್ ನಲ್ಲಿ ಮತ್ತೆರಡು ಬಹುನಿರೀಕ್ಷಿತ ಸಿನಿಮಾಗಳ ರಿಲೀಸ್ ಡೇಟ್ ಅನೌನ್ಸ್

ಸ್ಯಾಂಡಲ್ ವುಡ್ ನಲ್ಲಿ ಮತ್ತೆರಡು ಬಹುನಿರೀಕ್ಷಿತ ಸಿನಿಮಾಗಳ ರಿಲೀಸ್ ಡೇಟ್ ಅನೌನ್ಸ್
ಬೆಂಗಳೂರು , ಭಾನುವಾರ, 17 ಅಕ್ಟೋಬರ್ 2021 (12:20 IST)
ಬೆಂಗಳೂರು: ದಸರಾ ಹಬ್ಬದ ಸಂದರ್ಭದಲ್ಲಿ ಸಿನಿರಂಗ ಚಿತ್ರಪ್ರೇಮಿಗಳಿಗೆ ಭರ್ಜರಿ ಖುಷಿಯ ಸುದ್ದಿಯನ್ನೇ ನೀಡಿದೆ. ಇದೀಗ ಎರಡು ಬಹುನಿರೀಕ್ಷಿತ ಸಿನಿಮಾಗಳ ರಿಲೀಸ್ ಡೇಟ್ ಅನೌನ್ಸ್ ಆಗಿವೆ.


ಜೋಗಿ ಪ್ರೇಮ್ ನಿರ್ದೇಶನದ ರಕ್ಷಿತಾ ಪ್ರೇಮ್ ಸಹೋದರ ರಾಣಾ ನಾಯಕರಾಗಿರುವ ‘ಏಕ್ ಲವ್ ಯಾ’ ಸಿನಿಮಾ ರಿಲೀಸ್ ದಿನಾಂಕವನ್ನು ಚಿತ್ರತಂಡ ಪ್ರಕಟಿಸಿದೆ. ಈ ಸಿನಿಮಾ ಮುಂದಿನ ವರ್ಷ ಜನವರಿ 21 ಕ್ಕೆ ತೆರೆ ಕಾಣುತ್ತಿದೆ. ಈಗಾಗಲೇ ಹಾಡುಗಳ ಮೂಲಕ ಸುದ್ದಿ ಮಾಡಿರುವ ಸಿನಿಮಾದಲ್ಲಿ ರಾಣಾ ಜೊತೆಗೆ ನಾಯಕಿಯಾಗಿ ರೇಶ್ಮಾ ನಾಣಯ್ಯ ಹಾಗೂ ವಿಶೇಷ ಪಾತ್ರದಲ್ಲಿ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ.

ಇನ್ನೊಂದು ಸಿನಿಮಾ ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಗರುಡಗಮನ ವೃಷಭ ವಾಹನ. ಪಕ್ಕಾ ಕರಾವಳಿ ಹಿನ್ನಲೆಯಲ್ಲಿ ಮೂಡಿಬಂದಿರುವ ಗ್ರಾಮೀಣ ಕತೆಯಿರುವ ಈ ಸಿನಿಮಾ ಇದೇ ನವಂಬರ್ 19 ರಂದು ತೆರೆ ಕಾಣುತ್ತಿದೆ. ರಾಜ್ ಬಿ ಶೆಟ್ಟಿ ನಿರ್ದೇಶನದ ಸಿನಿಮಾದ ಟ್ರೈಲರ್ ಇದೀಗ ಅನಾವರಣಗೊಂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಿವರಾಜ್ ಕುಮಾರ್ ಅವರ ಮುಂಬರುವ ಸಿನಿಮಾಗಳ ಲಿಸ್ಟ್