Select Your Language

Notifications

webdunia
webdunia
webdunia
webdunia

ಯಶ್ ಬಗ್ಗೆ ಬಂದ ಸುಳ್ಳು ಸುದ್ದಿಯೇ ಇಷ್ಟೊಂದು ವೈರಲ್ ಆಯ್ತು!

ರಾಕಿಂಗ್ ಸ್ಟಾರ್ ಯಶ್
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಏನೇ ಸುದ್ದಿ ಬಂದರೂ ಅಭಿಮಾನಿಗಳ ಪಾಲಿಗೆ ಅದು ಹಬ್ಬವೇ. ಇದೀಗ ಅವರ ಬಗ್ಗೆ ಬಂದ ರೂಮರ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಕೆಜಿಎಫ್ 2 ಮುಗಿಸಿರುವ ಯಶ್ ಮುಂದಿನ ಸಿನಿಮಾ ಯಾವುದು ಎಂಬುದನ್ನು ಇದುವರೆಗೆ ಎಲ್ಲೂ ಬಾಯ್ಬಿಟ್ಟಿಲ್ಲ. ಆದರೆ ಇದೂ ಕೂಡಾ ಪ್ಯಾನ್ ಇಂಡಿಯಾ ಸಿನಿಮಾವಾಗಲಿದೆ, ದೊಡ್ಡ ನಿರ್ಮಾಪಕರೊಬ್ಬರು ಯಶ್ ಕಾಲ್ ಶೀಟ್ ಪಡೆದಿದ್ದಾರೆ ಎಂಬಿತ್ಯಾದಿ ಸುದ್ದಿಗಳು ಹರಿದಾಡುತ್ತಲೇ ಇವೆ.

ಇದರ ನಡುವೆ ಇಂದು ಯಾರೋ ಟ್ವಿಟರಿಗರು ಯಶ್ 19 ನೆಯ ಸಿನಿಮಾ ಇಂದು ಅನೌನ್ಸ್ ಆಗಲಿದೆ ಎಂದು ಸುದ್ದಿ ಹರಿಯಬಿಟ್ಟಿದ್ದರು. ಅಷ್ಟಕ್ಕೇ ಸೋಷಿಯಲ್ ಮೀಡಿಯಾದಲ್ಲಿ ಈ ಸುದ್ದಿ ವೈರಲ್ ಆಯ್ತು. ಆದರೆ ಅಸಲಿಗೆ ಇದು ಕೇವಲ ವದಂತಿಗಳಾಗಿತ್ತಷ್ಟೇ. ಆದರೂ ಒಂದು ವದಂತಿಗೇ ಯಶ್ ಬಗ್ಗೆ ಜನಕ್ಕಿರುವ ಕ್ರೇಜ್ ಎಷ್ಟು ಎನ್ನುವುದು ಇದರಿಂದ ಸಾಬೀತಾಯ್ತು.

Share this Story:

Follow Webdunia kannada

ಮುಂದಿನ ಸುದ್ದಿ

ನಾಲ್ಕು ದಿನಕ್ಕೆ ನಲ್ವತ್ತು ಕೋಟಿ ಕಲೆಕ್ಷನ್: ಕೋಟಿಗೊಬ್ಬ 3 ಸಾಧನೆಗೆ ಖುಷಿಯಾದ ಕಿಚ್ಚ