ಬೆಂಗಳೂರು: ಏಕ್ ಲವ್ ಯಾ ಅಡಿಯೋ ಲಾಂಚ್ ನಲ್ಲಿ ಪುನೀತ್ ರಾಜ್ ಕುಮಾರ್ ಫೋಟೋ ಮುಂದೆ ಶಾಂಪೈನ್ ಬಾಟಲಿ ಓಪನ್ ಮಾಡಿದ ವಿಚಾರ ಅಭಿಮಾನಿಗಳಿಗೆ ತೀವ್ರ ಬೇಸರ ತಂದಿದೆ.
ಈ ಬಗ್ಗೆ ನಿರ್ದೇಶಕ ಜೋಗಿ ಪ್ರೇಮ್ ಮತ್ತು ಇಡೀ ಚಿತ್ರತಂಡವೇ ಬಹಿರಂಗ ಕ್ಷಮೆ ಯಾಚಿಸಿದೆ. ಆದರೂ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಪ್ರೇಮ್ ಹಾಗೂ ಇಡೀ ಚಿತ್ರತಂಡದ ಮೇಲೆ ಬೇಸರ ವ್ಯಕ್ತಪಡಿಸಿದೆ.
ನೀವು ತಪ್ಪು ಮಾಡಿ ಈಗ ಕ್ಷಮೆ ಕೇಳಿದರೂ, ಏನೇ ಸಮಜಾಯಿಷಿ ಕೊಟ್ಟರೂ ಎಲ್ಲಾ ತಿಳಿದು, ಅನುಭವಿಗಳಾಗಿದ್ದುಕೊಂಡು ನೀವು ಇಂತಹದ್ದಕ್ಕೆ ಅವಕಾಶ ಮಾಡಿಕೊಡಬಾರದಿತ್ತು ಪ್ರೇಮ್ ಸರ್ ಎಂದು ಅನೇಕರು ಕಾಮೆಂಟ್ ಮೂಲಕ ತಮ್ಮ ಬೇಸರ ಹೊರಹಾಕಿದ್ದಾರೆ. ನಿಜವಾಗಿ ನಿಮಗೆ ಅಪ್ಪು ಸರ್ ಮೇಲೆ ಗೌರವವಿದ್ದರೆ ಶಾಂಪೈನ್ ಬಾಟಲಿ ಓಪನ್ ಮಾಡುವ ಬದಲು ಬಡ ಮಕ್ಕಳಿಗೆ ಪುಸ್ತಕ, ಪೆನ್ನು ಹಂಚಬೇಕಿತ್ತು. ಆಗ ಆ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಅವರಿಗೆ ನಿಜವಾದ ಅರ್ಥದಲ್ಲಿ ಶ್ರದ್ಧಾಂಜಲಿ ಸಿಗುತ್ತಿತ್ತು ಎಂದಿದ್ದಾರೆ.