Select Your Language

Notifications

webdunia
webdunia
webdunia
webdunia

ಫ್ಯಾನ್ಸ್ ಜೊತೆ ಸಿನಿಮಾ ನೋಡಲು ಮುಂದಾದ ಶಿವರಾಜ್ ಕುಮಾರ್

ಫ್ಯಾನ್ಸ್ ಜೊತೆ ಸಿನಿಮಾ ನೋಡಲು ಮುಂದಾದ ಶಿವರಾಜ್ ಕುಮಾರ್
ಬೆಂಗಳೂರು , ಭಾನುವಾರ, 14 ನವೆಂಬರ್ 2021 (09:30 IST)
ಬೆಂಗಳೂರು: ತಮ್ಮ ಪುನೀತ್ ಸಾವಿನ ದುಃಖ ಮರೆಯಲು ಶಿವರಾಜ್ ಕುಮಾರ್ ಇಂದು ಅಭಿಮಾನಿಗಳ ಜೊತೆ ಕಾಲ ಕಳೆಯಲಿದ್ದಾರೆ.

ಪುನೀತ್ ಸಾವಿನ  ದಿನ ಶಿವಣ್ಣ ಅಭಿನಯದ ‘ಭಜರಂಗಿ 2’ ಸಿನಿಮಾ ರಿಲೀಸ್ ಆಗಿತ್ತು. ಇಷ್ಟು ದಿನ ಭಜರಂಗಿ 2 ಸಿನಿಮಾ ಪ್ರಚಾರಕ್ಕೆ ಬರುವ ಸ್ಥಿತಿಯಲ್ಲಿ ಶಿವಣ್ಣ ಇರಲಿಲ್ಲ.

ಇಂದು ಮಧ‍್ಯಾಹ್ನ 1.30 ಕ್ಕೆ ನಗರದ ಅನುಪಮ ಥಿಯೇಟರ್ ನಲ್ಲಿ ಜನರ ಜೊತೆ ಕುಳಿತು ಭಜರಂಗಿ 2 ಸಿನಿಮಾ ವೀಕ್ಷಿಸಲು ನಿರ್ಧರಿಸಿದ್ದಾರೆ. ಜೊತೆಗೆ ತಮ್ಮ ದುಃಖ ಮರೆತು ಮತ್ತೆ ಸಹಜ ಬದುಕಿಗೆ ಮರಳಲು ಪ್ರಯತ್ನಿಸಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ದಿನಪೂರ್ತಿ ರೈತರ ಜೊತೆ ಕಳೆಯಲಿದ್ದಾರೆ ಡಿ ಬಾಸ್ ದರ್ಶನ್