Select Your Language

Notifications

webdunia
webdunia
webdunia
webdunia

ನಟ ಕಮ್ ರಾಜಕಾರಣಿ ಬಿ.ಸಿ. ಪಾಟೀಲರಿಗೆ ಜನ್ಮದಿನ ಶುಭಾಶಯ ಕೋರಿದ ದರ್ಶನ್

ನಟ ಕಮ್ ರಾಜಕಾರಣಿ ಬಿ.ಸಿ. ಪಾಟೀಲರಿಗೆ ಜನ್ಮದಿನ ಶುಭಾಶಯ ಕೋರಿದ ದರ್ಶನ್
ಬೆಂಗಳೂರು , ಭಾನುವಾರ, 14 ನವೆಂಬರ್ 2021 (09:50 IST)
ಬೆಂಗಳೂರು: ಚಿತ್ರರಂಗದಲ್ಲಿ ಕೌರವ ಎಂದೇ ಚಿರಪರಿಚಿತರಾಗಿರುವ ನಟ, ಸಚಿವ ಬಿ.ಸಿ. ಪಾಟೀಲ್ ಗೆ ಇಂದು ಜನ್ಮದಿನದ ಸಂಭ್ರಮ.

ಕೃಷಿ ಸಚಿವರಾಗಿರುವ ಬಿ.ಸಿ. ಪಾಟೀಲ್ ಗೆ ಆತ್ಮೀಯರಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಮಾಜಿಕ ಜಾಲತಾಣದ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

ಕೃಷಿ ಇಲಾಖೆಯ ರಾಯಭಾರಿಯೂ ಆಗಿರುವ ದರ್ಶನ್, ನಿಮ್ಮ ಕಲಾ ಸೇವೆ ಮತ್ತು ರಾಜಕೀಯ ಸೇವೆ ಎರಡರಲ್ಲೂ ಅತ್ಯುನ್ನತ ಸ್ಥಾನಕ್ಕೇರಿ ಉತ್ತಮ ಕೆಲಸಗಳನ್ನು ಮಾಡುವ ಅವಕಾಶ ದೊರೆಯಲಿ ಎಂದು ಹಾರೈಸುತ್ತೇನೆ ಎಂದು ಶುಭ ಹಾರೈಸಿದ್ದಾರೆ. ಇಂದು ದರ್ಶನ್, ಕೃಷಿ ಸಚಿವರೊಂದಿಗೆ ದಿನವಿಡೀ ಕಾರ್ಯಕ್ರಮದಲ್ಲಿ ಕಳೆಯಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಫ್ಯಾನ್ಸ್ ಜೊತೆ ಸಿನಿಮಾ ನೋಡಲು ಮುಂದಾದ ಶಿವರಾಜ್ ಕುಮಾರ್