Select Your Language

Notifications

webdunia
webdunia
webdunia
webdunia

ಮಕ್ಕಳ ದಿನಾಚರಣೆ ದಿನ ಪುನೀತ್ ಮಕ್ಕಳಿಗೆ ಫ್ಯಾನ್ಸ್ ಸಾಥ್

ಮಕ್ಕಳ ದಿನಾಚರಣೆ ದಿನ ಪುನೀತ್ ಮಕ್ಕಳಿಗೆ ಫ್ಯಾನ್ಸ್ ಸಾಥ್
ಬೆಂಗಳೂರು , ಭಾನುವಾರ, 14 ನವೆಂಬರ್ 2021 (10:43 IST)
ಬೆಂಗಳೂರು: ಇಂದು ದೇಶದಾದ್ಯಂತ ದೇಶದ ಪ್ರಪ್ರಥಮ ಪ್ರಧಾನಿ ಜವಹರ್ ಲಾಲ್ ನೆಹರೂ ಜನ್ಮ ದಿನ ಪ್ರಯುಕ್ತ ಮಕ್ಕಳ ದಿನಾಚರಣೆ ಆಚರಿಸಲಾಗುತ್ತಿದೆ. ಎಲ್ಲಾ ತಾರೆಯರೂ ಸಾಮಾಜಿಕ ಜಾಲತಾಣದ ಮೂಲಕ ವಿಶ್ ಮಾಡುತ್ತಿದ್ದಾರೆ.

ಆದರೆ ಈ ಬಾರಿ ಎಂದಿನಂತೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಶುಭಾಶಯವನ್ನು ಅಭಿಮಾನಿಗಳು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಅಪ್ಪು ಫ್ಯಾನ್ಸ್ ಅವರ ಮಕ್ಕಳಾದ ಧೃತಿ, ವಂದಿತಾಗೆ ‍ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಅಪ್ಪು ಪ್ಯಾನ್ಸ್, ಇಬ್ಬರು ಮಕ್ಕಳಿಗೆ ಸಂದೇಶ ನೀಡಿದ್ದು, ನಿಮ್ಮ ಜೊತೆಗೆ ನಾವಿದ್ದೇವೆ, ನೀವು ಧೃತಿಗೆಡಬೇಡಿ ಎಂದು ಸಾಂತ್ವನ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅರರೇ..! ರಶ್ಮಿಕಾ ಮಂದಣ್ಣ ಕೈಗೆ ಇದೇನಾಗಿ ಹೋಯ್ತು?