Select Your Language

Notifications

webdunia
webdunia
webdunia
webdunia

ಅರರೇ..! ರಶ್ಮಿಕಾ ಮಂದಣ್ಣ ಕೈಗೆ ಇದೇನಾಗಿ ಹೋಯ್ತು?

ಅರರೇ..! ರಶ್ಮಿಕಾ ಮಂದಣ್ಣ ಕೈಗೆ ಇದೇನಾಗಿ ಹೋಯ್ತು?
ಹೈದರಾಬಾದ್ , ಭಾನುವಾರ, 14 ನವೆಂಬರ್ 2021 (10:20 IST)
ಹೈದರಾಬಾದ್: ಕಿರಿಕ್ ಬೆಡಗಿ ರಶ್ಮಿಕಾ ತಮ್ಮ ಮೈ ಕಾಂತಿಗಾಗಿ ಏನೆಲ್ಲಾ ವರ್ಕೌಟ್, ಡಯಟ್ ಮಾಡುತ್ತಾರೆಂದು ಅಭಿಮಾನಿಗಳಿಗೆ ಗೊತ್ತು. ಹಾಗಿದ್ದರೂ ರಶ್ಮಿಕಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ಫೋಟೋವೊಂದು ಅಭಿಮಾನಿಗಳಲ್ಲಿ ಅಚ್ಚರಿ ಉಂಟು ಮಾಡಿದೆ.

ಅಲ್ಲು ಅರ್ಜುನ್ ನಾಯಕರಾಗಿರುವ ಪುಷ್ಪ ಸಿನಿಮಾದಲ್ಲಿ ನಾಯಕಿಯಾಗಿರುವ ರಶ್ಮಿಕಾ ಆ ಸಿನಿಮಾದಲ್ಲಿ ಕಪ್ಪಗಾಗಿ ಕಾಣಿಸಿಕೊಳ್ಳುತ್ತಾರೆ. ಅಸಲಿಗೆ ಅವರು ಈ ಸಿನಿಮಾದಲ್ಲಿ ಕಪ್ಪು ಕಾಣಿಸಲು ಮೇಕಪ್ ಹಾಕಿಕೊಂಡಿದ್ದರು.

ಇದೀಗ ಅದೇ ಪುಷ್ಪ ಸಿನಿಮಾ ಶೂಟಿಂಗ್ ನ ಲಂಚ್ ಬ್ರೇಕ್ ನಡುವೆ ತಮ್ಮ ಕೈ ಬಣ್ಣದಲ್ಲಾಗುವ ಬದಲಾವಣೆ ಬಗ್ಗೆ ತಮಾಷೆಯಾಗಿ ಫೋಟೋ ಪ್ರಕಟಿಸಿದ್ದಾರೆ. ಶೂಟಿಂಗ್ ನಲ್ಲಿದ್ದೇನೆ. ಲಂಚ್ ಬ್ರೇಕ್ ಬಂದರೆ ನನ್ನ ಕೈ ಈ ರೀತಿ ಬಣ್ಣ ಬದಲಾಯಿಸುತ್ತದೆ ನೋಡಿ ಎಂದು ಅಂಗೈ ಬಿಳುಪಾಗಿ ಮೊಣಕೈ ಕಪ್ಪಗಾಗಿರುವ ಫೋಟೋ ಪ್ರಕಟಿಸಿ ತಮಾಷೆ ಮಾಡಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ಕಮ್ ರಾಜಕಾರಣಿ ಬಿ.ಸಿ. ಪಾಟೀಲರಿಗೆ ಜನ್ಮದಿನ ಶುಭಾಶಯ ಕೋರಿದ ದರ್ಶನ್