ಮುಂಬೈ: ಕಾಶ್ಮೀರಿ ಪಂಡಿತರ ನರಮೇಧದ ಕುರಿತಾದ ಕತೆಯುಳ್ಳ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಾಲಿವುಡ್ ನಲ್ಲಿ ಸಂಚಲನ ಮೂಡಿಸಿತ್ತು.
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಬಾಚಿದ್ದಲ್ಲದೆ, ರಾಜಕೀಯದಲ್ಲೂ ತಲ್ಲಣ ಸೃಷ್ಟಿಸಿತ್ತು.ಈ ಸಿನಿಮಾವನ್ನು ಬಾಲಿವುಡ್ ಸ್ಟಾರ್ ಗಳೂ ಕೊಂಡಾಡಿದ್ದರು.
ಆದರೆ ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ ಪತ್ರಿಕೆಯೊಂದರ ಅಂಕಣದಲ್ಲಿ ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಟೈಟಲ್ ನ್ನು ವ್ಯಂಗ್ಯ ಮಾಡಿದ್ದಾರೆ. ಈ ಸಿನಿಮಾ ಬಳಿಕ ಈಗ ಬಾಲಿವುಡ್ ನಲ್ಲಿ ಫೈಲ್ಸ್ ಎಂಬ ಹೆಸರಿನಲ್ಲಿ ಅನೇಕ ಸಿನಿಮಾ ಟೈಟಲ್ ಗಳು ರಿಜಿಸ್ಟರ್ ಆಗಲು ಆರಂಭವಾಗಿದೆ ಎಂದು ಟ್ವಿಂಕಲ್ ಜೋಕ್ ಮಾಡಿದ್ದಾರೆ. ವಿಶೇಷವೆಂದರೆ ಇದೇ ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಿಂದಾಗಿ ಟ್ವಿಂಕಲ್ ಪತಿ ಅಕ್ಷಯ್ ಕುಮಾರ್ ನಾಯಕರಾಗಿದ್ದ ಬಚ್ಚನ್ ಪಾಂಡೆ ಸಿನಿಮಾ ಗಳಿಕೆಗೆ ಹೊಡೆತ ಬಿದ್ದಿತ್ತು.