ಮುಂಬೈ: ದಿ ಕಾಶ್ಮೀರ್ ಫೈಲ್ಸ್ ಎಂಬ ಸಿನಿಮಾ ನಿರ್ದೇಶಿಸಿ ಇಡೀ ದೇಶದಲ್ಲೇ ಸಂಚಲನ ಮೂಡಿಸಿರುವ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ವಿರುದ್ಧ ಈಗ ದೂರು ದಾಖಲಾಗಿದೆ.
									
			
			 
 			
 
 			
			                     
							
							
			        							
								
																	ಸಂದರ್ಶನವೊಂದರಲ್ಲಿ ಮಾತನಾಡುವಾಗ ವಿವೇಕ್ ಭೋಪಾಲಿ ಜನರನ್ನು ಸಾಮಾನ್ಯವಾಗಿ ಸಲಿಂಗಿಗಳು ಎಂದು ಪರಿಗಣಿಸಲಾಗುತ್ತದೆ ಎಂದಿದ್ದರು.
									
										
								
																	ಈ ಸಂಬಂಧ ಭೋಪಾಲ್ ನ ವ್ಯಕ್ತಿಯೊಬ್ಬರು ವಿವೇಕ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ನಾನೂ ಭೋಪಾಲಿಯೇ ಆದರೆ ಭೋಪಾಲಿಗ ಎಂದು ಹೇಳಿಕೊಳ‍್ಳುವುದಿಲ್ಲ. ಯಾಕೆಂದರೆ ಅಲ್ಲಿನವರು ಒಂದು ರೀತಿಯಲ್ಲಿ ಸಲಿಂಗಿಗಳು ಎಂದು ಹೇಳಿದ್ದ ವಿವೇಕ್ ಮಾತುಗಳು ವೈರಲ್ ಆಗಿದ್ದವು.