Publish Date: Mon, 21 Mar 2022 (16:37 IST)
Updated Date: Mon, 21 Mar 2022 (16:39 IST)
ಮುಂಬೈ: ಅನಿಲ್ ಕಪೂರ್ ಪುತ್ರಿ, ಬಾಲಿವುಡ್ ನಟಿ ಸೋನಂ ಕಪೂರ್-ಆನಂದ್ ಅಹುಜಾ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಭಾವನಾತ್ಮಕ ಸಂದೇಶದ ಮೂಲಕ ಈ ವಿಚಾರವನ್ನು ಸೋನಂ ಪ್ರಕಟಿಸಿದ್ದಾರೆ. ಜೊತೆಗೆ ತಮ್ಮ ಬೇಬಿ ಬಂಪ್ ಫೋಟೋವನ್ನೂ ಪ್ರಕಟಿಸಿದ್ದಾರೆ.
2018 ರಲ್ಲಿ ಸೋನಂ-ಆನಂದ್ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು. ಇದೀಗ ಮೊದಲ ಮಗುವನ್ನು ಬರಮಾಡಿಕೊಳ್ಳುವ ಸಂಭ್ರಮದಲ್ಲಿದ್ದಾರೆ.