ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಸಿನಿಮಾ ಇಂದು ಅಭಿಮಾನಿಗಳಿಗೆ ಭರ್ಜರಿ ಅಪ್ ಡೇಟ್ ಕೊಡಲಿದೆ.
ಚಿತ್ರದ ಮೊದಲ ಹಾಡು ಇಂದು ಬೆಳಿಗ್ಗೆ 11.07 ಕ್ಕೆ ಲಾಂಚ್ ಆಗುತ್ತಿದೆ. ತೂಫಾನ್ ಲಿರಿಕಲ್ ಹಾಡಿನ ವಿಡಿಯೋ ಬಿಡುಗಡೆಯಾಗುತ್ತಿರುವುದು ಅಭಿಮಾನಿಗಳಲ್ಲಿ ಪುಳಕವುಂಟು ಮಾಡಿದ್ದು, ನಿನ್ನೆಯಿಂದಲೇ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ.
ರವಿ ಬಸ್ರೂರು ಸಂಗೀತ ಸಂಯೋಜನೆಯಲ್ಲಿ ಕೆಜಿಎಫ್ 1 ಚಿತ್ರದ ಹಾಡುಗಳೆಲ್ಲವೂ ಸೂಪರ್ ಹಿಟ್ ಆಗಿದ್ದವು. ಈಗಲೂ ಅವರು ಅಂತಹದ್ದೇ ಭರ್ಜರಿ ಹಾಡುಗಳನ್ನು ನೀಡಲಿದ್ದಾರೆ ಎಂಬ ನಿರೀಕ್ಷೆ ಅಭಿಮಾನಿಗಳದ್ದು. ಇದಕ್ಕೂ ಮೊದಲು ನಿನ್ನೆ ರಾಕಿ ಭಾಯ್ ನ ವಿಶೇಷ ಫೋಟೋ ಬಿಡುಗಡೆ ಮಾಡಿ ಕೆಜಿಎಫ್ 2 ತಂಡ ಅಭಿಮಾನಿಗಳನ್ನು ಎಚ್ಚರಿಸಿದೆ.