Publish Date: Sat, 19 Mar 2022 (18:00 IST)
Updated Date: Sat, 19 Mar 2022 (18:05 IST)
ಗ್ರಾಮ ಪಂಚಾಯತಿ ಸದಸ್ಯರಾದ ಪತ್ರಯ್ಯ ಹಾಗೂ ಶಾಂತಯ್ಯ ಎಂಬುವರು ಪುನೀತ್ ರಾಜ್ಕುಮಾರ್ ಬ್ಯಾನರ್ ಹಾಗೂ ಕನ್ನಡ ಬಾವುಟವನ್ನು ಕಿತ್ತುಕೊಂಡು ಹೋಗಿ ಕೆರೆಗೆ ಬಿಸಾಡಿದ್ದಾರೆ. ಅಪ್ಪು ಭಾವಚಿತ್ರವುಳ್ಳ ಬ್ಯಾನರ್ ಕಿತ್ತುಹಾಕಿರೋ ದೃಶ್ಯ ಸಿಸಿಟಿವಿಯಲ್ಲೂ ಸೆರೆಯಾಗಿದೆ. ಗ್ರಾಮ ಪಂಚಾಯತ್ ಸದಸ್ಯ ಪತ್ರಯ್ಯ ಹಾಗೂ ಶಾಂತಯ್ಯರನ್ನು ಪೊಲೀಸರು ಬಂಧಿಸಿದ್ದಾರೆ.
ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆಂದು ಜಿಲ್ಲಾಧಿಕಾರಿಗಳು ಹುವಿನಾಳ ಗ್ರಾಮಕ್ಕೆ ಆಗಮಿಸಿದ್ರು ಈ ವೇಳೆ ಅಪ್ಪು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ನಾಮ ಫಲಕ, ಕನ್ನಡ ಬಾವುಟ ಕಿತ್ತು ಹಾಕಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದಾರೆ.