Publish Date: Fri, 18 Mar 2022 (09:00 IST)
Updated Date: Fri, 18 Mar 2022 (09:21 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಸಿನಿಮಾ ಥಿಯೇಟರ್ ನಲ್ಲಿ ಧೂಳೆಬ್ಬಿಸುತ್ತಿದೆ. ಈ ನಡುವೆ ಸ್ಯಾಟ್ ಲೈಟ್ಸ್ ಹಕ್ಕು ಕೂಡಾ ದಾಖಲೆ ಮೊತ್ತಕ್ಕೆ ಸೇಲ್ಸ್ ಆಗಿದೆ.
ನಿನ್ನೆ ಬೆಳ್ಳಂ ಬೆಳಿಗ್ಗೆಯೇ ಥಿಯೇಟರ್ ಮುಂದೆ ಸಾಲುಗಟ್ಟಿ ನಿಂತು ಜನ ಜೇಮ್ಸ್ ವೀಕ್ಷಣೆ ಮಾಡುತ್ತಿದ್ದಾರೆ. ಇನ್ನೇನು ವಾರಂತ್ಯ ಬರುತ್ತಿದ್ದು, ಈ ನೂಕು ನುಗ್ಗಲು ಇನ್ನಷ್ಟು ಹೆಚ್ಚಾಗಲಿದೆ.
ಇನ್ನು, ಜೇಮ್ಸ್ ಸಿನಿಮಾ ಸ್ಯಾಟ್ ಲೈಟ್ ಹಕ್ಕು ಬರೋಬ್ಬರಿ 13.80 ಕೋಟಿ ರೂ.ಗೆ ಕನ್ನಡದಲ್ಲಿ ಸ್ಟಾರ್ ಸುವರ್ಣಗೆ ಮಾರಾಟವಾಗಿದೆಯಂತೆ. ಎಲ್ಲಾ ಭಾಷೆಗಳಲ್ಲೂ ಸೇರಿ ಸುಮಾರು 80 ಕೋಟಿ ರೂ. ಟಿವಿ ರೈಟ್ಸ್ ನಲ್ಲಿ ಗಳಿಕೆ ಮಾಡಿದೆ ಎನ್ನಲಾಗುತ್ತಿದೆ. ಇದು ಕೆಜಿಎಫ್ 1 ಗಿಂತಲೂ ಅಧಿಕ ಎನ್ನುವುದು ವಿಶೇಷ.
Krishnaveni K
Publish Date: Fri, 18 Mar 2022 (09:00 IST)
Updated Date: Fri, 18 Mar 2022 (09:21 IST)