ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಇನ್ನು ತೆರೆ ಮೇಲೆ ಕಾಣುವ ಅವಕಾಶವಿಲ್ಲ ಎಂದು ಬೇಸರದಲ್ಲಿರುವ ಅಭಿಮಾನಿಗಳಿಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ರಾಜಕುಮಾರ, ಯುವರತ್ನದಂತಹ ಹಿಟ್ ಸಿನಿಮಾಗಳನ್ನು ನೀಡಿರುವ ಸಂತೋಷ್ ಆನಂದ್ ರಾಮ್ ಅಭಿಮಾನಿಗಳ ಕೋರಿಕೆಯೊಂದನ್ನು ಈಡೇರಿಸಲು ತೀರ್ಮಾನಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಯುವರತ್ನದಲ್ಲಿ ಡಿಲೀಟ್ ಮಾಡಲಾಗಿದ್ದ, ಇದುವರೆಗೆ ಹೊರಬಿಡದ ದೃಶ್ಯಗಳನ್ನು ರಿಲೀಸ್ ಮಾಡಿ ಎಂದು ಅಭಿಮಾನಿಗಳು ಕೇಳುತ್ತಲೇ ಇದ್ದಾರೆ.
ಇದೀಗ ಅಭಿಮಾನಿಗಳ ಕೋರಿಕೆಗೆ ಪ್ರತಿಕ್ರಿಯಿಸಿರುವ ಸಂತೋಷ್ ಆನಂದ್ ರಾಮ್, ಎಲ್ಲವನ್ನೂ ಒಂದೇ ಸಮಯಕ್ಕೆ ನೀಡಿದರೆ ಚೆನ್ನಾಗಿರದು. ಸದ್ಯದಲ್ಲೇ ಅದನ್ನು ರಿಲೀಸ್ ಮಾಡುತ್ತೇನೆ. ನಮ್ಮ ಪವರ್ ಸ್ಟಾರ್ ನನ್ನು ತೆರೆ ಮೇಲೆ ಎಂಜಾಯ್ ಮಾಡೋಣ ಎಂದಿದ್ದಾರೆ. ಹೀಗಾಗಿ ಸದ್ಯದಲ್ಲೇ ಯುವರತ್ನದಲ್ಲಿ ಇದುವರೆಗೆ ಹೊರಬಿಡದ ದೃಶ್ಯಗಳನ್ನು ಅಭಿಮಾನಿಗಳಿಗಾಗಿ ಹೊರತರುವುದು ಖಚಿತವಾಗಿದೆ.