Select Your Language

Notifications

webdunia
webdunia
webdunia
webdunia

ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಭಾರತೀಯರೆಲ್ಲರೂ ನೋಡಲೇಬೇಕು: ಅಮೀರ್ ಖಾನ್

ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಭಾರತೀಯರೆಲ್ಲರೂ ನೋಡಲೇಬೇಕು: ಅಮೀರ್ ಖಾನ್
ನವದೆಹಲಿ , ಸೋಮವಾರ, 21 ಮಾರ್ಚ್ 2022 (10:20 IST)
ನವದೆಹಲಿ: ದೇಶದಲ್ಲಿ ಸಂಚಲನ ಸೃಷ್ಟಿಸಿರುವ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಗ್ಗೆ ಬಾಲಿವುಡ್ ನಟ ಅಮೀರ್ ಖಾನ್ ಭರಪೂರ ಹೊಗಳಿದ್ದಾರೆ.

ದೆಹಲಿಯಲ್ಲಿ ನಡೆದ ಆರ್ ಆರ್ ಆರ್ ಸಿನಿಮಾದ ಮಾಧ್ಯಮಗೋಷ್ಠಿಯಲ್ಲಿ ಅಲಿಯಾ ಭಟ್ ಜೊತೆಗೆ ಅಮೀರ್ ಖಾನ್ ಕೂಡಾ ಪಾಲ್ಗೊಂಡಿದ್ದರು. ಈ ವೇಳೆ ಮಾಧ್ಯಮ ಪ್ರತಿನಿಧಿಗಳು ಕಾಶ್ಮೀರ್ ಫೈಲ್ಸ್ ಸಿನಿಮಾ ಬಗ್ಗೆ ಪ್ರಶ್ನಿಸಿದ್ದಾರೆ.

ಇದಕ್ಕೆ ಉತ್ತರಿಸಿದ ಅಮೀರ್ ಖಾನ್ ‘ಖಂಡಿತಾ ನಾನು ಈ ಸಿನಿಮಾ ನೋಡುವೆ. ಈ ಸಿನಿಮಾದ ಕತೆ ನಮ್ಮ ಚರಿತ್ರೆಯ ಭಾಗವಾಗಿದೆ. ಕಾಶ್ಮೀರಿ ಪಂಡಿತರ ವಿರುದ್ಧ ಹಿಂದೆ ನಡೆದಿದ್ದು ನಿಜವಾಗಿಯೂ ಖೇದದ ವಿಚಾರ. ಅಂತಹ ಸಿನಿಮಾಗಳನ್ನು ಭಾರತೀಯರೆಲ್ಲರೂ ನೋಡಲೇಬೇಕು. ಇಂತಹ ಸಿನಿಮಾಗಳು ಯಶಸ್ವಿಯಾಗುವುದು ನನಗೆ ಸಂತೋಷ ಕೊಡುತ್ತದೆ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಮೆರಿಕಾದ ಕಾಲೇಜಿನಲ್ಲಿ ಪುನೀತ್ ಹಾಡಿಗೆ ಮಕ್ಕಳ ಡ್ಯಾನ್ಸ್