Select Your Language

Notifications

webdunia
webdunia
webdunia
webdunia

ಕೆಜಿಎಫ್ 2 ಸಿನಿಮಾ ಟ್ರೈಲರ್ ಹೋಸ್ಟ್ ಮಾಡಲಿರುವ ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್

ಕೆಜಿಎಫ್ 2 ಸಿನಿಮಾ ಟ್ರೈಲರ್ ಹೋಸ್ಟ್ ಮಾಡಲಿರುವ ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್
ಬೆಂಗಳೂರು , ಶುಕ್ರವಾರ, 25 ಮಾರ್ಚ್ 2022 (16:47 IST)
ಬೆಂಗಳೂರು: ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ 2 ಟ್ರೈಲರ್ ಮಾರ್ಚ್ 27 ರಂದು ಭಾನುವಾರ ಬಿಡುಗಡೆಯಾಗುತ್ತಿದೆ. ಈ ಕಾರ್ಯಕ್ರಮದ ನಿರೂಪಣೆಯನ್ನು ಬಾಲಿವುಡ್ ನ ಖ್ಯಾತ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ನಿರ್ವಹಿಸಲಿದ್ದಾರೆ ಎಂದು ಚಿತ್ರತಂಡ ಘೋಷಿಸಿದೆ.

ಕರಣ್ ಬಾಲಿವುಡ್ ನ ಅನೇಕ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದಾರೆ. ಆದರೆ ಕನ್ನಡದ ಕಾರ್ಯಕ್ರಮವೊಂದಕ್ಕೆ ನಿರೂಪಕರಾಗುತ್ತಿರುವುದು ಇದೇ ಮೊದಲು.  ಇದಕ್ಕಾಗಿ ಅವರು ಬೆಂಗಳೂರಿಗೆ ಬಂದಿಳಿಯಲಿದ್ದಾರೆ.

ಭಾನುವಾರ ನಡೆಯಲಿರುವ ಟ್ರೈಲರ್ ಲಾಂಚ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದ್ದು, ಇದರಲ್ಲಿ ಖ್ಯಾತ ಕಲಾವಿದರು, ತಂತ್ರಜ್ಞರು, ಸಿಂಎ ಬೊಮ್ಮಾಯಿ ಕೂಡಾ ಭಾಗಿಯಾಗುವ ನಿರೀಕ್ಷೆಯಿದೆ. ನಟ ಶಿವರಾಜ್ ಕುಮಾರ್, ಮಲಯಾಳಂ ನಟ ಪೃಥ್ವಿರಾಜ್, ಬಾಲಿವುಡ್ ನಟ ಸಂಜಯ್ ದತ್, ರವೀನಾ ಟಂಡನ್, ರಾಕಿಂಗ್  ಸ್ಟಾರ್ ಯಶ್, ಶ್ರೀನಿಧಿ ಶೆಟ್ಟಿ ಸೇರಿದಂತೆ ತಾರಾಗಣವೇ ಈ ಕಾರ್ಯಕ್ರಮದಲ್ಲಿ ಮೇಳೈಸಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಮ್ ಗೋಪಾಲ್ ವರ್ಮಾ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ