ಬೆಂಗಳೂರು: ಬಹುನಿರೀಕ್ಷಿತ ಕೆಜಿಎಫ್ 2 ಸಿನಿಮಾ ಆರು ಸಾವಿರಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಬಿಡುಗಡೆಯಾಗಲಿದೆ.
ಇತ್ತೀಚೆಗೆ ಜೇಮ್ಸ್ ಸಿನಿಮಾ 4,000 ಪ್ಲಸ್ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿ ಭರ್ಜರಿ ಗಳಿಕೆ ಮಾಡಿತ್ತು. ಇದೀಗ ಕೆಜಿಎಫ್ ಕೂಡಾ ಅದೇ ರೀತಿ ದಾಖಲೆ ಮಾಡಲು ಹೊರಟಿದೆ.
ಏಪ್ರಿಲ್ 14 ಕ್ಕೆ ಸಿನಿಮಾ ವಿಶ್ವದಾದ್ಯಂತ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಇದೇ ಭಾನುವಾರ ಟ್ರೈಲರ್ ಲಾಂಚ್ ಆಗಲಿದೆ.