Publish Date: Fri, 25 Mar 2022 (09:20 IST)
Updated Date: Fri, 25 Mar 2022 (09:31 IST)
ಹೈದರಾಬಾದ್: ಎಸ್.ಎಸ್. ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಬಿಡುಗಡೆಯಾಗಿದ್ದು, ಮೊದಲ ಶೋ ವೀಕ್ಷಿಸಿದ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ರಿವ್ಯೂ ಬರೆದುಕೊಂಡಿದ್ದಾರೆ.
ಸಿನಿಮಾ ವೀಕ್ಷಿಸಿದ ಅಭಿಮಾನಿಗಳು ರಾಮ್ ಚರಣ್, ಜ್ಯೂ.ಎನ್ ಟಿಆರ್ ಫೈಟ್, ಡ್ಯಾನ್ಸ್ ಗೆ ಫಿದಾ ಆಗಿದ್ದಾರೆ. ಸೆಕೆಂಡ್ ಹಾಫ್ ಕೊಂಚ ನಿಧಾನವಾಯಿತಾದರೂ ಕ್ಲೈಮ್ಯಾಕ್ಸ್ ಸೂಪರ್ ಎಂದು ಕೊಂಡಾಡುತ್ತಿದ್ದಾರೆ.
ಇನ್ನು, ಕೆಲವರು ಈ ಸಿನಿಮಾವನ್ನು ಬಾಹುಬಲಿ ಸರಣಿಗಿಂತಲೂ ಅತ್ಯುತ್ತಮ ಎನ್ನುತ್ತಿದ್ದಾರೆ. ಬಾಹುಬಲಿ ಸಿನಿಮಾ ಮೂಲಕ ರಾಜಮೌಳಿ ಮ್ಯಾಜಿಕ್ ಮಾಡಿದ್ದರು. ಆದರೆ ಈ ಸಿನಿಮಾ ಅದಕ್ಕಿಂತಲೂ ಉತ್ತಮವಾಗಿದೆ ಎನ್ನುತ್ತಿದ್ದಾರೆ.