Publish Date: Fri, 25 Mar 2022 (08:50 IST)
Updated Date: Fri, 25 Mar 2022 (09:14 IST)
ಹೈದರಾಬಾದ್: ಬಹುನಿರೀಕ್ಷಿತ ಆರ್ ಆರ್ ಆರ್ ಸಿನಿಮಾ ಇಂದು ಬಿಡುಗಡೆಯಾಗಿದ್ದು, ಅಭಿಮಾನಿಗಳು ಪಟಾಕಿ ಸಿಡಿಸಿ ಸಿನಿಮಾ ಬರಮಾಡಿಕೊಂಡಿದ್ದಾರೆ.
170 ಕ್ಕೂ ಹೆಚ್ಚು ಸಿಂಗಲ್ ಸ್ಕ್ರೀನ್ ಮತ್ತು 450 ಮಲ್ಟಿಪ್ಲೆಕ್ಸ್ ಸ್ಕ್ರೀನ್ ಗಳಲ್ಲಿ ಚಿತ್ರ ಬಿಡುಗಡೆಯಾಗಿದೆ. ಫಸ್ಟ್ ಡೇ ಫಸ್ಟ್ ಶೋ ಹೌಸ್ ಫುಲ್ ಆಗಿ ಪ್ರದರ್ಶನಗೊಂಡಿದೆ.
ಕೆಲವೆಡೆ ಅಭಿಮಾನಿಗಳ ನಡುವೆ ಸಣ್ಣ ಘರ್ಷಣೆಗಳೂ ಆಗಿವೆ. ರಾಜಮೌಳಿ ನಿರ್ದೇಶನದ ಸಿನಿಮಾ ಜೊತೆಗೆ ರಾಮ್ ಚರಣ್ ತೇಜ್, ಜ್ಯೂ.ಎನ್ ಟಿಆರ್ ನಾಯಕರು ಎಂಬ ಕಾರಣಕ್ಕೆ ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ಸಹಜವಾಗಿಯೇ ಕುತೂಹಲ ಹೆಚ್ಚಿದೆ.