ಬೆಂಗಳೂರು: ಆರ್ ಆರ್ ಆರ್ ಸಿನಿಮಾ ಕನ್ನಡದಲ್ಲಿ ಬಿಡುಗಡೆಯಾಗುತ್ತಿದ್ದರೂ ಕನ್ನಡ ಅವತರಣಿಕೆಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಬಿಡುಗಡೆಯಾಗುತ್ತಿಲ್ಲ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಿಂದೆಯೂ ಪ್ಯಾನ್ ಇಂಡಿಯಾ ಸಿನಿಮಾ ಬಿಡುಗಡೆಯಾದಾಗ ಇದೇ ರೀತಿ ಆಗಿತ್ತು. ಕನ್ನಡದ ಬಗ್ಗೆ ಈ ಅವಗಣನೆ ಯಾಕೆ ಎಂಬುದು ಎಲ್ಲರ ಪ್ರಶ್ನೆ.
ಆದರೆ ಇದಕ್ಕೆ ಕಾರಣ ಕನ್ನಡ ವಿತರಕರು ಎಂಬ ಆರೋಪವೂ ಇದೆ. ಕರ್ನಾಟಕದಲ್ಲಿ ಬೇರೆ ಕನ್ನಡ ಹೊರತಾದ ಭಾಷೆಗಳಲ್ಲಿ ಬಿಡುಗಡೆಯಾದರೂ ಜನ ನೋಡುತ್ತಾರೆ ಎಂಬ ಅಸಡ್ಡೆಯಿದೆ. ಈ ಕಾರಣಕ್ಕೆ ವಿತರಕರೂ ಕನ್ನಡ ಅವತರಣಿಕೆ ಬಗ್ಗೆ ಹೆಚ್ಚು ಆಸಕ್ತಿ ತೋರುವುದಿಲ್ಲ. ಜನರ ಬೇಡಿಕೆಗೆ ಅನುಸಾರವಾಗಿ ವಿತರಕರು ವಿತರಿಸುತ್ತಾರೆ ಎಂಬ ಆರೋಪವೂ ಇದೆ. ಹೀಗಾಗಿ ಈ ಅವಾಂತರಕ್ಕೆ ಪ್ರೇಕ್ಷಕರು ಮತ್ತು ವಿತರಕರ ನಡುವೆ ಕೆಸರೆರಚಾಟ ನಡೆಯುತ್ತಲೇ ಇದೆ.