Select Your Language

Notifications

webdunia
webdunia
webdunia
webdunia

ದಿ ಕಾಶ್ಮೀರ್ ಫೈಲ್ಸ್ ವೀಕ್ಷಿಸಿ ಅನುಪಮ್ ಖೇರ್ ಗೆ ಕರೆ ಮಾಡಿದ್ದ ಸಲ್ಮಾನ್ ಖಾನ್

ಸಲ್ಮಾನ್ ಖಾನ್
ಮುಂಬೈ , ಸೋಮವಾರ, 28 ಮಾರ್ಚ್ 2022 (17:18 IST)
ಮುಂಬೈ: ದೇಶದೆಲ್ಲಡೆ ಸಂಚಲನ ಸೃಷ್ಟಿಸಿ ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ಕುರಿತಾದ ಕತೆಯುಳ್ಳ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ವೀಕ್ಷಿಸಿದ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದ ಅನುಪಮ್ ಖೇರ್ ಗೆ ಕರೆ ಮಾಡಿದ್ದಾರಂತೆ.

ಈ ಬಗ್ಗೆ ಸ್ವತಃ ಅನುಪಮ್ ಖೇರ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಸಿನಿಮಾದಲ್ಲಿ ಪುಷ್ಕರ್ ನಾಥ್ ಎಂಬ ಹಿಂದೂ ಪಂಡಿತರ ಪಾತ್ರ ಮಾಡಿದ್ದ ಅನುಪಮ್ ಖೇರ್ ತಮ್ಮ ಮನೋಜ್ಞ ಅಭಿನಯದ ಮೂಲಕ ಎಲ್ಲರ ಕಣ್ತುಂಬುವಂತೆ ಮಾಡಿದ್ದರು.

ಈ ಸಿನಿಮಾ ವೀಕ್ಷಿಸಿದ ಸಲ್ಮಾನ್ ಖಾನ್ ಖುದ್ದಾಗಿ ಕರೆ ಮಾಡಿ ನನಗೆ ಅಭಿನಂದಿಸಿದರು ಮತ್ತು ಸಿನಿಮಾವನ್ನು ಕೊಂಡಾಡಿದರು ಎಂದು ಅನುಪಮ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಶ್-ರಾಧಿಕಾ ಬ್ಯೂಟಿಫುಲ್ ಎಂದು ಹೊಗಳಿದ ಕರಣ್ ಜೋಹರ್