Publish Date: Mon, 24 Dec 2018 (12:32 IST)
Updated Date: Mon, 24 Dec 2018 (12:34 IST)
ಮುಂಬೈ : ತಂದೆಯ ಮೊಬೈಲ್ ನಲ್ಲಿ ಸೆಕ್ಸ್ ವಿಡಿಯೋ ನೋಡಿ ಉದ್ರೇಕಗೊಂಡ 15 ವರ್ಷದ ಬಾಲಕನೊಬ್ಬ 10 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಮಾಡಿದ ಘಟನೆ ಮುಂಬೈನಲ್ಲಿ ನಡೆದಿದೆ.
ಕೊಲೆಯಾದ ಬಾಲಕ ಹಾಗೂ ಆರೋಪಿ ಬಾಲಕ ನೆರೆಹೊರೆ ಮನೆಯವರಾಗಿದ್ದು, ನೀಲಿ ಚಿತ್ರ ನೋಡಿ ಪ್ರೇರಿತನಾದ 15 ವರ್ಷದ ಬಾಲಕ ಸಂಜೆ ಟ್ಯೂಷನ್ ನಿಂದ ಮರಳುತ್ತಿದ್ದ 10 ವರ್ಷದ ಬಾಲಕನನ್ನು ತನ್ನ ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಲು ಮುಂದಾಗಿದ್ದಾನೆ. ಆಗ ಬಾಲಕ ಕಿರುಚಿಕೊಂಡಿದ್ದಕ್ಕೆ ಆತನ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದಿದ್ದರಿಂದ ಉಸಿರುಗಟ್ಟಿಸಿ ಬಾಲಕ ಮೃತಪಟ್ಟಿದ್ದಾನೆ.
ಆಗ ಬಾಲಕನ ಉಡುಪುಗಳನ್ನು ಬಿಚ್ಚಿ ಶವವನ್ನು ಮಾತ್ರ ಟ್ರಾಲಿ ಬ್ಯಾಗ್‍ನಲ್ಲಿ ಇಟ್ಟು ಬಳಿಕ ಬಟ್ಟೆ ಹಾಗೂ ಸ್ಕೂಲ್ ಬ್ಯಾಗ್ ಅನ್ನು ಸಾರ್ವಜನಿಕ ಶೌಚಾಲಯದಲ್ಲಿ ಬಚ್ಚಿಟ್ಟು ತನಿಖೆಯ ದಿಕ್ಕು ತಪ್ಪಿಸಲು ಯತ್ನಿಸಿದ್ದಾನೆ. ನಂತರ ಬಾಲಕನ ಮೃತದೇಹವನ್ನು ತನ್ನ ಸ್ನೇಹಿತನ ಸ್ಕೂಟರ್ ಮೇಲೆ ಸಪೇದ್ ಪುಲ್ ನಾಲಾವರೆಗೂ ತೆಗೆದುಕೊಂಡು ಹೋಗಿ ನಾಲೆಯಲ್ಲಿ ಮೃತದೇಹ ಎಸೆದು ಪರಾರಿಯಾಗಿದ್ದಾನೆ.
ಇತ್ತ ಪೋಷಕರು ಮಗ ಕಾಣದೆ ಹುಡುಕಾಟ ಶುರು ಮಾಡಿದ್ದರು. ಪ್ರಕರಣಕ್ಕೆ ತಿರುವು ನೀಡಲು ಆರೋಪಿ ಬಾಲಕ ಗೆಳೆಯನೊಂದಿಗೆ ಸೇರಿ ಬಾಲಕನನ್ನು ಕಿಡ್ನ್ಯಾಪ್ ಮಾಡಿರುವುದಾಗಿ ಆತನ ಪೋಷಕರಿಗೆ ಫೋನ್ ಮಾಡಿ ಹಣದ ಬೇಡಿಕೆ ಇಟ್ಟಿದ್ದಾನೆ. ನಂತರ ಕೊಲೆಯಾಗಿದ್ದ ಬಾಲಕನ ಮೃತ ದೇಹವು ಸಪೇದ್ ಪುಲ್ ನಾಲಾದಲ್ಲಿ ತೇಲುತ್ತಿದ್ದ ಟ್ರಾಲಿ ಬ್ಯಾಗ್‍ನಲ್ಲಿ ಶನಿವಾರ ಪತ್ತೆಯಾಗಿತ್ತು.
ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು ಸಿಸಿಟಿವಿ ದೃಶ್ಯವನ್ನು ಪರೀಕ್ಷಿಸಿದಾಗ ಆರೋಪಿ ಬಾಲಕ ಸ್ಕೂಟರ್ ಮೇಲೆ ಟ್ರಾಲಿ ಬ್ಯಾಗ್ ಶವ ಸಾಗಿಸುತ್ತಿರುವುದು ಪತ್ತೆಯಾಗಿದೆ. ತಕ್ಷಣವೇ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆತ ಸತ್ಯಾಂಶ ಬಾಯ್ಬಿಟ್ಟಿದ್ದಾನೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.