Publish Date: Fri, 21 Dec 2018 (07:33 IST)
Updated Date: Fri, 21 Dec 2018 (07:35 IST)
ಬೆಂಗಳೂರು : ಟ್ಯೂಷನ್ ಮಾಸ್ಟರ್ ಒಬ್ಬ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿ ಪೊಲೀಸರ ಅತಿಥಿಯಾದ ಘಟನೆ ಬೆಂಗಳೂರಿನ ಅನೇಪಾಳ್ಯದಲ್ಲಿ ನಡೆದಿದೆ.
ಮುನೀರ್ ಸಾಬ್ ಎಂಬಾತ ಅನೇಪಾಳ್ಯದಲ್ಲಿ ಟ್ಯೂಷನ್ ಕ್ಲಾಸ್ ನಡೆಸುತ್ತಿದ್ದು, ಈ ಕ್ಲಾಸ್ ಗೆ ಬರುತ್ತಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ತರಗತಿಯ ವೇಳೆ ಮುನೀರ್ ಸಾಬ್ ಹೆಚ್ಚಾಗಿ ಲೈಂಗಿಕ ಚಟುವಟಿಕೆಯ ಬಗ್ಗೆ ಮಾತನಾಡುತ್ತಿದ್ದ. ಅಷ್ಟೇ ಅಲ್ಲದೆ ತನ್ನ ಮೊಬೈಲ್ನಲ್ಲಿ ಸೆಕ್ಸ್ ವಿಡಿಯೋ ತೋರಿಸಿ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದನಂತೆ.
ಟ್ಯೂಷನ್ ಮಾಸ್ಟರ್ ವರ್ತನೆಯ ಬಗ್ಗೆ ವಿದ್ಯಾರ್ಥಿ ಪೋಷಕರಿಗೆ ತಿಳಿಸಿದ್ದ ಕಾರಣ ಪೋಷಕರು ಟ್ಯೂಷನ್ ಮಾಸ್ಟರ್ ಮುನೀರ್ ಸಾಬ್ನ ವಿರುದ್ಧ ಅಶೋಕನಗರ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಅನ್ವಯ ಪೊಲೀಸರು ಮುನೀರ್ ಸಾಬ್ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.