Publish Date: Fri, 21 Dec 2018 (07:29 IST)
Updated Date: Fri, 21 Dec 2018 (07:32 IST)
ಪಣಜಿ : ಗೋವಾ ಬೀಚ್ ಗೆಂದು ಬರುತ್ತಿದ್ದ 42 ವರ್ಷದ ಬ್ರಿಟಿಷ್ ಮಹಿಳೆಯೊಬ್ಬಳ ಮೇಲೆ ದುಷ್ಕರ್ಮಿಗಳು ಅತ್ಯಾಚಾರವೆಸಗಿ ಆಕೆಯ ಬಳಿಯಿದ್ದ ಹಣ ಲೂಟಿ ಮಾಡಿದ ಘಟನೆ ಗೋವಾದ ಕಾನಕೋನದ ದಕ್ಷಿಣ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.
ಸಂಜೆಯ ವೇಳೆ ಮಹಿಳೆ ಪಾಲೊಲೆಮ್ ಬೀಚ್ಗೆ ಬರುತ್ತಿದ್ದ ವೇಳೆ ರೈಲು ಹೊರಡಲು ವಿಳಂಬಗೊಂಡ ಕಾರಣ ಆಕೆ ನಡೆದುಕೊಂಡು ಹೋಗಲು ನಿರ್ಧರಿಸಿದ್ದಾಳೆ. ಆಗ ಎದುರಿಗೆ ಬಂದ ದುಷ್ಕರ್ಮಿಗಳು ಆಕೆಯ ಮೇಲೆ ಅತ್ಯಾಚಾರವೆಸಗಿ ಆಕೆಯ ಬಳಿಯಿದ್ದ ಹಣ ಲೂಟಿ ಮಾಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು,ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.