Daily Horoscope

Select Your Language

Notifications

webdunia
webdunia
webdunia
webdunia

ಮಂಗಳೂರಿನವರು ಕನ್ನಡ ಮಾತಾಡಲ್ಲ ಎಂದು ನಿಮಗೆ ಯಾರು ಹೇಳಿದ್ದು: ಪತ್ರಕರ್ತರ ಪ್ರಶ್ನೆಗೆ ತಬ್ಬಿಬ್ಬಾದ ಝೈದ್ ಖಾನ್

Zaid Khan
ಬೆಂಗಳೂರು: ಕಲ್ಟ್ ಸಿನಿಮಾ ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ಮೂಲದ ಪತ್ರಕರ್ತರೊಬ್ಬರು ನಟ ಝೈದ್ ಖಾನ್ ರನ್ನು ಮಂಗಳೂರಿನವರು ಕನ್ನಡ ಮಾತಾಡಲ್ಲ ಎಂದು ನಿಮಗೆ ಯಾರು ಹೇಳಿದ್ದು ಎಂದು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

ಇತ್ತೀಚೆಗೆ ನಟ ಝೈದ್ ಖಾನ್ ಇಂಗ್ಲಿಷ್, ತುಳು ಬಿಟ್ಟು ಕನ್ನಡ ಮಾತನಾಡಿ ಎಂದು ಮಂಗಳೂರಿನಲ್ಲಿ ಹೇಳಿಕೆ ನೀಡಿದ್ದರು. ಇದಕ್ಕೆ ಮಂಗಳೂರಿಗರು ನಿಮ್ಮ ಸಿನಿಮಾ ಬಂದ್ ಮಾಡ್ತೀವಿ ಎಂದು ಎಚ್ಚರಿಕೆ ನೀಡಿದ್ದರು. ಇದಕ್ಕೆ ಝೈದ್ ಖಾನ್ ನನಗೆ ಮಂಗಳೂರಿನಿಂದ ಕಲೆಕ್ಷನ್ ಬೇಡ ಎಂದಿದ್ದರು.

ಅವರ ಈ ಹೇಳಿಕೆಗೆ ನಿನ್ನೆ ಕಲ್ಟ್ ಸಿನಿಮಾ ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ಮೂಲದ ಪತ್ರಕರ್ತರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಾನು ತುಳು ಧ್ವೇಷಿಯಲ್ಲ. ಕನ್ನಡ ಮಾತಾಡಿ ಎಂದಷ್ಟೇ ಹೇಳಿರೋದು ಝೈದ್ ಖಾನ್ ಹೇಳಿದ್ದಾರೆ. ಇದಕ್ಕೆ ಮಂಗಳೂರಿನ ಪತ್ರಕರ್ತರು ಮಂಗಳೂರಿನವರು ಕನ್ನಡ ಮಾತಾಡಲ್ಲ ಎಂದು ನಿಮಗೆ ಯಾರು ಹೇಳಿದ್ರು ಎಂದು ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ಉತ್ತರಿಸಿದ ಝೈದ್ ಖಾನ್, ನಾನು ಉಡುಪಿ, ಮಂಗಳೂರು ಸೇರಿದಂತೆ ಆ ಭಾಗಕ್ಕೆ ಪ್ರವಾಸ ಹೋಗಿದ್ದೀನಲ್ಲ ಸಾರ್. ಆಗ ಎಲ್ಲರೂ ತುಳುವಿನಲ್ಲೇ ಮಾತಾಡ್ತಾರೆ. ಹಾಗಾಗಿ ಕನ್ನಡ ಮಾತಾಡಿ ಎಂದಷ್ಟೇ ಹೇಳಿದ್ದೇನೆ ಎಂದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಯಾರೋ ಒಬ್ಬ ನಂಗೆ ಈಡಿಯಟ್ ಅಂದ್ರೆ ನಾನು ಈಡಿಯಟ್ಟಾ... ವೇದಿಕೆ ಮೇಲೆ ಆ ಪದ ಬಳಸಿದ ರಚಿತಾ ರಾಮ್ Video