Select Your Language

Notifications

webdunia
webdunia
webdunia
webdunia

ಯಾರೋ ಒಬ್ಬ ನಂಗೆ ಈಡಿಯಟ್ ಅಂದ್ರೆ ನಾನು ಈಡಿಯಟ್ಟಾ... ವೇದಿಕೆ ಮೇಲೆ ಆ ಪದ ಬಳಸಿದ ರಚಿತಾ ರಾಮ್ Video

Rachitha Ram

Krishnaveni K

ಬೆಂಗಳೂರು , ಶನಿವಾರ, 17 ಜನವರಿ 2026 (09:46 IST)
ಬೆಂಗಳೂರು: ಕೆಟ್ಟ ಕಾಮೆಂಟ್ ಮಾಡುವವರ ಬಗ್ಗೆ ಆಕ್ರೋಶ ವ್ಯಕ್ತಪಡಿಸುವ ಭರದಲ್ಲಿ ವೇದಿಕೆ ಮೇಲೆಯೇ ನಟಿ ರಚಿತಾ ರಾಮ್ f*** ಪದ ಬಳಸಿದ್ದು ಈಗ ಚರ್ಚೆಗೆ ಕಾರಣವಾಗಿದೆ.

ಕಲ್ಟ್ ಸಿನಿಮಾ ಪತ್ರಿಕಾಗೋಷ್ಠಿಯಲ್ಲಿ ರಚಿತಾ ರಾಮ್ ಚಿತ್ರತಂಡದ ಸದಸ್ಯರ ಜೊತೆ ಭಾಗಿಯಾಗಿದ್ದರು. ಈ ವೇಳೆ ಪತ್ರಕರ್ತರು ಬಾಡಿ ಶೇಮಿಂಗ್ ಮಾಡುವವರ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ರಚಿತಾ ಆಕ್ರೋಶ ಭರಿತರಾಗಿ ಮಾತನಾಡುತ್ತಿದ್ದರು. ಈ ವೇಳೆ ಅವರು ಬಾಯ್ತಪ್ಪಿ ಆ ಪದ ಬಳಕೆ ಮಾಡಿದ್ದಾರೆ.

ಬಾಡಿ ಶೇಮಿಂಗ್ ಮಾಡುವವರಿಂದ ಎಷ್ಟೋ ಜನ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳೂ ಇವೆ. ಒಬ್ಬ ಸ್ಟಾರ್ ನಟಿಯಾಗಿ ಮತ್ತು ಹೆಣ್ಣಾಗಿ ನೀವು ಇದರ ಬಗ್ಗೆ ಏನು ಹೇಳ್ತೀರಿ ಎಂದು ರಚಿತಾಗೆ ಮಾಧ್ಯಮ ಪ್ರತಿನಿಧಿಯೊಬ್ಬರು ಪ್ರಶ್ನಿಸಿದ್ದಾರೆ.

ಇದಕ್ಕೆ ಉತ್ತರಿಸಿದ ರಚಿತಾ ‘ಆತ್ಮಹತ್ಯೆ ಮಾಡಿಕೊಳ್ಳುವವರನ್ನು ಮೂರ್ಖರು ಎಂದು ಹೇಳುತ್ತೇನೆ. ಇದಕ್ಕೇನಾ ನಿಮ್ಮ ಅಪ್ಪ-ಅಮ್ಮ ನಿಮಗೆ ಜೀವ ಕೊಟ್ಟಿದ್ದು. ಇರೋದು ಒಂದು ಜೀವನ, ಜೀವ ಅದನ್ನು ಯಾರೋ ಏನೋ ಹೇಳಿದ್ರು ಅಂತ ಕಳೆದುಕೊಳ್ತೀರಾ? ನಾನಂತೂ ಇಂತಹ ಕೆಟ್ಟ ಕಾಮೆಂಟ್ ಗಳನ್ನು ಕೇಳಿಸಿಕೊಳ್ಳೋದೇ ಇಲ್ಲ. ಯಾರೋ ಒಬ್ಬ ಈಡಿಯಟ್ ಎಂದ ತಕ್ಷಣ ನಾನು ಈಡಿಯಟ್ ಆಗ್ತೀನಾ? ಇಲ್ಲ ನನ್ನ ಹೆಸರು ರಚಿತಾ. ಹಾಗೆ ಕರೆದ್ರೆ ನಾನು ಪ್ರತಿಕ್ರಿಯಿಸುತ್ತೇನೆ. ಯೂ ಕಾಲ್ ಮಿ ಈಡಿಯಟ್ f .. ಇಲ್ಲ ಗೆಟ್ ಲಾಸ್ಟ್’ ಎಂದಿದ್ದಾರೆ. ಅವರ ಈ ಹೇಳಿಕೆ ಈಗ ವೈರಲ್ ಆಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

BigBoss Season Finale: ದಿನ ಬಾಕಿಯಿರುವಾಗಲೇ ಗಿಲ್ಲಿ ಬಗ್ಗೆ ಶಿವಣ್ಣ ಶಾಕಿಂಗ್ ಮಾತು