Daily Horoscope

Select Your Language

Notifications

webdunia
webdunia
webdunia
webdunia

ಕೊನೆಯ ದಿನದ ಚಿತ್ರೀಕರಣ ಮುಗಿಸಿದ ಪುಟ್ಟಕ್ಕನ ಮಕ್ಕಳು

Puttakkana Makkalu
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹಿರಿಯ ನಟಿ ಉಮಾಶ್ರೀ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವವ ಪುಟ್ಟಕ್ಕನ ಮಕ್ಕಳು ಧಾರವಾಹಿ ಕೊನೆಯ ದಿನದ ಚಿತ್ರೀಕರಣ ಮುಕ್ತಾಯವಾಗಿದೆ.

ಪುಟ್ಟಕ್ಕನ ಮಕ್ಕಳು ಧಾರವಾಹಿ 1200 ಸಂಚಿಕೆಗಳನ್ನು ಪೂರ್ತಿ ಮಾಡಿ ಮುನ್ನುಗ್ಗುತ್ತಿದೆ. ಈ ಧಾರವಾಹಿಯಲ್ಲಿ ಏಕಾಂಗಿಯಾಗಿ ತನ್ನ ನಾಲ್ವರು ಹೆಣ್ಣು ಮಕ್ಕಳನ್ನು ಬೆಳೆಸಿ ಸ್ವಾವಲಂಬಿಯಾಗಿ ಬದುಕುವ ಪುಟ್ಟಕ್ಕ ಎಂಬ ಛಲಗಾತಿ ಮಹಿಳೆಯ ಕತೆಯಿದೆ.

ಈ ಧಾರವಾಹಿ ಹಲವು-ಏಳು ಬೀಳುಗಳನ್ನು ಕಂಡು ಇದುವರೆಗೆ 1202 ಸಂಚಿಕೆಗಳನ್ನು ಕಂಡಿದೆ. ಧಾರವಾಹಿಯಲ್ಲಿ ಹಿರಿಯ ನಟಿ ಉಮಾಶ್ರೀ ಜೊತೆಗೆ ಕಂಠಿ ಪಾತ್ರದ ಮೂಲಕ ಧನುಷ್ ಗೌಡ, ಹಿರಿಯ ನಟ ರಮೇಶ್ ಪಂಡಿತ್ ಸೇರಿದಂತೆ ಪ್ರತಿಭಾವಂತರ ಬಳಗವಿದೆ.


ಈ ಧಾರವಾಹಿ ಈಗ ಕೊನೆಯ ದಿನದ ಚಿತ್ರೀಕರಣ ಪೂರ್ತಿ ಮಾಡಿದೆ. ಸದ್ಯದಲ್ಲೇ ಪುಟ್ಟಕ್ಕನ ಮಕ್ಕಳು ಧಾರವಾಹಿ ಕೊನೆಯಾಗಲಿದೆ. ಈಗಾಗಲೇ ಕೊನೆಯ ದಿನದ ಚಿತ್ರೀಕರಣ ಪೂರ್ಣಗೊಂಡಿದ್ದು ಫೋಟೋಗಳೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಿರ್ದೇಶಕ, ನಿರ್ಮಾಪಕ ಆರೂರು ಜಗದೀಶ್ ಆಂಡ್ ಟೀಂ ಜೊತೆಯಾಗಿ ಗ್ರೂಪ್ ಫೋಟೋಗೆ ಪೋಸ್ ನೀಡಿದೆ. ಸದ್ಯದಲ್ಲೇ ಧಾರವಾಹಿ ಕೊನೆಯಾಗುವುದು ಪಕ್ಕಾ ಆಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಸಂಕ್ರಾಂತಿಯಂದು ನಟಿ ಅಮೂಲ್ಯ ಅಭಿನಯದ ಪೀಕೂ ಸಿನಿಮಾದ ನಟನ ಘೋಷಣೆ