ನಟಿ ಅಮೂಲ್ಯ ಅವರು ಮದುವೆ ಆದ ಮೇಲೆ ಮತ್ತೇ ತೆರೆ ಮೇಲೆ ಬರುತ್ತಿದ್ದು, ಇದೀಗ ಅವರಿಗೆ ಜೋಡಿಯಾಗಿ ಶ್ರೀರಾಮ್ ಅವರನ್ನು ಪರಿಚಯಿಸಿದೆ. ಸಂಕ್ರಾಂತಿ ವಿಶೇಷ ಸುಗ್ಗಿ ಸಂಭ್ರಮದಲ್ಲಿ ಇದೀಗ ಪೀಕಬೂ ತಂಡ ನಾಯಕ ನಟನನ್ನು ಪರಚಯಿಸಿದೆ.
ಶ್ರಾವಣಿ ಸುಬ್ರಮಣ್ಯ ಹಿಟ್ ಕಾಂಬಿನೇಷನ್ ನಿರ್ದೇಶಕ ಮಂಜು ಸ್ವರಾಜ್ ಅವರು ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ನಾಯಕನ ಪರಿಚಯಕ್ಕೆ ವಿಶೇಷ ಟೀಸರ್ ಮಾಡಿರೋ ಪೀಕಬೂ ನಿರ್ದೇಶಕ ಅವರು ನಟನನ್ನು ಪರಿಚಯಿಸಿದ್ದಾರೆ.
ಇನ್ನೂ ಶ್ರೀರಾಮ್ ಅವರು ಇರುವುದೆಲ್ಲವ ಬಿಟ್ಟು, ಗಜಾನನ ಆ್ಯಂಡ್ ಗ್ಯಾಂಗ್, ಹೊಂದಿಸಿ ಬರೆಯಿರಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಾಯಕನಾಗಿ ಕಾಣಿಸಿಕೊಂಡ ಶ್ರೀಮಾದೇವ್, ಪೀಕಬೂ ಮೂಲಕ ಶ್ರೀರಾಮ್ ಅಂತ ಹೆಸರು ಬದಲಿಸಿಕೊಂಡಿದ್ದಾರೆ.
ಕೆಂಚಾಂಬ ಸಿನಿಮಾ ಬ್ಯಾನರ್ ಅಡಿಯಲ್ಲಿ, ಗಣೇಶ್ ಕೆಂಚಾಂಬ ನಿರ್ಮಾಣದಲ್ಲಿ ಪೀಕಬೂ ನಿರ್ಮಾಣವಾಗುತ್ತಿದೆ. ಮಂಜು ಸ್ವರಾಜ್ ನಿರ್ದೇಶನದ ಪೀಕಬೂಗೆ ಸುರೇಶ್ ಬಾಬು ಛಾಯಾಗ್ರಹಣ, ವೀರ್ ಸಮರ್ಥ್ ಶ್ರೀಧರ್ ಕಶ್ಯಪ್ ಸಂಗೀತ, ಎನ್‌ಎಂ ವಿಶ್ವ ಸಂಕಲನ ಈ ಚಿತ್ರಕ್ಕಿದೆ.