Select Your Language

Notifications

webdunia
webdunia
webdunia
webdunia

BigBoss Season Finale: ದಿನ ಬಾಕಿಯಿರುವಾಗಲೇ ಗಿಲ್ಲಿ ಬಗ್ಗೆ ಶಿವಣ್ಣ ಶಾಕಿಂಗ್ ಮಾತು

Shivarajkumar

Sampriya

ಬೆಂಗಳೂರು , ಶುಕ್ರವಾರ, 16 ಜನವರಿ 2026 (19:19 IST)
Photo Credit X
ನಾನು ಬಿಗ್‌ಬಾಸ್ ಸೀಸನ್‌ 12ನ್ನು ನಿರಂತರವಾಗಿ ನೋಡುತ್ತಿಲ್ಲ, ಆದರೆ ಗಿಲ್ಲಿ ಇಷ್ಟ, ಅವನ ನೇರ ಮಾತು ಆತನನ್ನು ಗೆಲ್ಲಿಸುತ್ತದೆ ಎಂದು ಡಾ.ಶಿವರಾಜ್‌ಕುಮಾರ್ ಹೇಳಿದರು. 

ಇಂದು ಬಿಗ್‌ಬಾಸ್ ಸೀಸನ್ ಫೈನಲ್ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದಾಗ ಪ್ರತಿಕ್ರಿಯಿಸಿದ ಶಿವಣ್ಣ, ನನಗೆ ಪ್ರತಿದಿನಲೂ ಬಿಗ್‌ಬಾಸ್ ನೋಡಕ್ಕೆ ಆಗಲ್ಲ, ಸಮಯ ಸಿಕ್ಕಾಗೆಲ್ಲ ನೋಡುತ್ತಿರುತ್ತೇನೆ. ಗಿಲ್ಲಿ ಮನಸ್ಸುಪೂರ್ವಕವಾಗಿ ಆಟವಾಡುತ್ತಿದ್ದಾನೆ. ಆತನ ನಡೆ ನಾಟಕೀಯ ಅನ್ಸಲ್ಲ. ಉತ್ತಮ ಮನಸ್ಸಿನಿಂದ ಗಿಲ್ಲಿ ಆಟವಾಡುತ್ತಿದ್ದಾನೆ ಎಂದರು. 

ಇನ್ನು ಗಿಲ್ಲಿ ಪರ ನಡೆಯುತ್ತಿರುವ ಪ್ರಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಒಬ್ಬ ಒಳ್ಳೆಯ ವ್ಯಕ್ತಿಗೆ ಯಾವುದೇ ಪ್ರಚಾರನೂ ಬೇಕಾಗಿಲ್ಲ. ಆತ ಕಂಟೆಂಟ್‌ಗೋಸ್ಕರ ಆ ರೀತಿ ನಡೆದುಕೊಳ್ಳುತ್ತಿಲ್ಲ. ಆತ ಇರುವುದೇ ಹಾಗೇ, ಹಾಗಾಗಿ ಅವನೂ ಎಲ್ಲರಿಗೂ ಇಷ್ಟವಾಗುತ್ತಾನೆ. 

ಇನ್ನೂ ಬಿಗ್‌ಬಾಸ್ ಸೀಸನ್ 12 ಯಾರೂ ಗೆಲ್ಲುತ್ತಾರೆ ಎಂದು ಪ್ರಶ್ನೆಗೆ ಮೇಜು ತಟ್ಟಿ ಗಿಲ್ಲಿನೇ ಈ ಸೀಸನ್ ಗೆಲ್ಲೋದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅದಲ್ಲದೆ ಗಿಲ್ಲಿಗೆ ಶುಭವಾಗಲಿ ಎಂದು ಹಾರೈಸಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್‌ಬಾಸ್‌ ಶೋ ಫೈನಲ್‌ ವಾರ ಶುರುವಾಗುತ್ತಿದ್ದಂತೆ ಪ್ರೋಗ್ರಾಂ ಹೆಡ್‌ಗೆ ಬಿಗ್‌ಶಾಕ್‌: ಕಾರಣ ಏನು ಗೊತ್ತಾ