Select Your Language

Notifications

webdunia
webdunia
webdunia
webdunia

ತಮಿಳಿನಿಂದ ಕನ್ನಡ: ನಟ ಕಮಲ್ ಹಾಸನ್ ಹೇಳಿಕೆಗಿಂತಲೂ ಶಿವಣ್ಣ ಮೌನಕ್ಕೆ ರಾಂಗ್ ಆದ ಕನ್ನಡಿಗರು

ಥಗ್ ಲೈಫ್ ಚಿತ್ರದ ಪ್ರಚಾರ

Sampriya

ಬೆಂಗಳೂರು , ಮಂಗಳವಾರ, 27 ಮೇ 2025 (20:01 IST)
Photo Credit X
ಬೆಂಗಳೂರು: ಥಗ್ ಲೈಫ್‌ ಇನ್ನೇನು ಸಿನಿಮಾ ಬಿಡುಗಡೆಯಾಗಬೇಕೆನ್ನುಷ್ಟರಲ್ಲಿ ಕಾಲಿವುಡ್ ನಟ ಕಮಲ್ ಹಾಸನ್‌ ಹೇಳಿಕೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಸಿನಿಮಾದ ಪ್ರಚಾರಕ್ಕಾಗಿ ಚಿತ್ರತಂಡ ಇಂದು (ಮೇ 27) ಬೆಂಗಳೂರಿಗೆ ಆಗಮಿಸಿದೆ. ಈ ವೇಳೆ, ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದ ಕಮಲ್ ಹಾಸನ್ ಹೇಳಿಕೆಗೆ ಕನ್ನಡಿಗರು ರಾಂಗ್ ಆಗಿದ್ದಾರೆ.

ಅದಲ್ಲದೆ ಈ ಹೇಳಿಕೆಯನ್ನು ನಟ ಶಿವರಾಜ್‌ಕುಮಾರ್ ಎದುರೇ ನೀಡಿದ್ದು, ಈ ವೇಳೆ ಶಿವಣ್ಣ ಮೌನವಹಿಸುರವ ಬಗ್ಗೆಯೂ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ.

kamal haasanಬೆಂಗಳೂರಿನಲ್ಲಿ ನಡೆದ ‘ಥಗ್ ಲೈಫ್’ ಪ್ರಚಾರ ಕಾರ್ಯಕ್ಕೆ ನಟ ಶಿವಣ್ಣ ಅತಿಥಿಯಾಗಿ ಭಾಗವಹಿಸಿದ್ದರು.

ಈ ವೇಳೆ, ರಾಜ್‌ಕುಮಾರ್ ಜೊತೆಗಿನ ಒಡನಾಡವನ್ನು ಕಮಲ್ ಹಾಸನ್ ಸ್ಮರಿಸಿದ್ದಾರೆ.

ಬಳಿಕ ಶಿವಣ್ಣ ಎದುರೇ ನಿಮ್ಮ ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂದು ನಟ ಹೇಳಿದ್ದಾರೆ. ಕನ್ನಡಿಗರ ಪ್ರೀತಿ, ಗೌರವಕ್ಕೆ ನಮಿಸುತ್ತಲೇ ನಿಮ್ಮ ಕನ್ನಡ ನಮ್ಮಿಂದ ಬಂದಿದ್ದು ಎಂದ ಕಮಲ್ ಹೇಳಿಕೆಗೆ ಕನ್ನಡಿಗರು ಕೆಂಡ ಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Madenur Manu: ಮಡೆನೂರು ಮನು ಬ್ಯಾನ್ ಓಕೆ, ಜೈಲಿಗೆ ಹೋಗಿದ್ದ ದರ್ಶನ್ ಗೆ ಬ್ಯಾನ್ ಇಲ್ಲ ಯಾಕೆ