Select Your Language

Notifications

webdunia
webdunia
webdunia
webdunia

ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳುವ ಮುನ್ನಾ ಶಿವನಸಮುದ್ರಕ್ಕೆ ಭೇಟಿ ನೀಡಿದ ಶಿವಣ್ಣ

Actor Shivrajkumar Visited Shivanasamudra, Karnataka Famous Temple ShivanaSamudra, Shivrajkumar Health,

Sampriya

ಚಾಮರಾಜನಗರ , ಸೋಮವಾರ, 16 ಡಿಸೆಂಬರ್ 2024 (19:34 IST)
Photo Courtesy X
ಚಾಮರಾಜನಗರ: ಚಿಕಿತ್ಸೆಗಾಗಿ ಇದೇ 18ರಂದು ವಿದೇಶಕ್ಕೆ ತೆರಳುವ ನಟ ಡಾ.ಶಿವರಾಜ್‌ಕುಮಾರ್ ಅವರು ಇಂದು ತಮ್ಮ ಪತ್ನಿ ಸಮೇತ ಚಾಮನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಶಿವನಸಮುದ್ರಕ್ಕೆ ಭೇಟಿ ನೀಡಿದರು.  

ಈಚೆಗೆ ಶಿವರಾಜ್ ಕುಮಾರ್ ಅವರು ತಮ್ಮ ಅನಾರೋಗ್ಯದ ಬಗ್ಗೆ ಮಾಧ್ಯಮದವರ ಬಳಿ ಹೇಳಿಕೊಂಡಿದ್ದರು. ಅದರ ಬೆನ್ನಲ್ಲೇ ತಿರುಪತಿ ತಿಮ್ಮಪ್ಪನ ದರ್ಶನ ಪಡೆದರು.  ಅಲ್ಲದೇ ಶಿವಣ್ಣ ಮತ್ತು ಪತ್ನಿ ಗೀತಾ ಸಮೇತ ತಿಮ್ಮಪ್ಪನಿಗೆ ಮುಡಿಕೊಟ್ಟಿದ್ದರು.

ಶಿವಣ್ಣ ಕುಟುಂಬದ ಜೊತೆ ಭೈರತಿ ರಣಗಲ್ ನಿರ್ಮಾಪಕ ಕೆ.ಪಿ.ಶ್ರೀಕಾಂತ್, ಹಾಗೂ ಶಿವಣ್ಣ ಪುತ್ರಿ ನಿವೇದಿತಾ ಸಹ ತಿಮ್ಮಪ್ಪನ ದರ್ಶನ ಪಡೆದಿದ್ದರು.

ಇದೀಗ ಇಂದು ಕಾವೇರಿ ನದಿಗೆ ಬಾಗಿನ ಅರ್ಪಿಸಿದ ಅವರು ಗಣಪತಿ ದೇವಸ್ಥಾನ, ಮಧ್ಯರಂಗ ಹಾಗೂ ಮೀನಾಕ್ಷಿ ಸಮೇತ ಸೋಮೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಶ್ರೀಚಕ್ರ ದರ್ಶನ ಮಾಡಿ ಆದಿಶಕ್ತಿ ಮಾರಮ್ಮ ದೇವಾಲಯಕ್ಕೆ ಸೀರೆ ಕಾಣಿಕೆ ಅರ್ಪಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ಸೀರಿಯಲ್‌ಗಾಗಿ ಕಲರ್ಸ್ ಕನ್ನಡದ ಜನಪ್ರಿಯ ಸೀರಿಯಲ್ ಅಂತ್ಯ, ಅಮೂಲ್ಯ ಅಭಿಮಾನಿಗಳಿಗೆ ಬೇಸರ