Select Your Language

Notifications

webdunia
webdunia
webdunia
webdunia

ಆರೋಗ್ಯದ ಬಗ್ಗೆ ಬಿಗ್‌ ಅಪ್‌ಡೇಟ್ ನೀಡಿದ ಶಿವರಾಜ್‌ಕುಮಾರ್‌

Bairathi Rangal Cinema Success, Hatric Hero Shivrajkumar, Shivrajkumar Health Update

Sampriya

ಶಿವಮೊಗ್ಗ , ಸೋಮವಾರ, 25 ನವೆಂಬರ್ 2024 (18:27 IST)
ಶಿವಮೊಗ್ಗ: ಭೈರತಿ ರಣಗಲ್ ಸಿನಿಮಾದ ಸಕ್ಸಸ್‌ನಲ್ಲಿರುವ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ಇಂದು ಪತ್ನಿ ಜತೆ ಶಿವಮೊಗ್ಗಕ್ಕೆ ಭೇಟಿ ನೀಡಿ ಅಲ್ಲಿನ ಚಿತ್ರಮಂದಿರಕ್ಕೆ ಆಗಮಿಸಿ ಅಭಿಮಾನಿಗಳ ಜತೆ ಸಿನಿಮಾ ಸಕ್ಸಸ್ ಬಗ್ಗೆ ಹಂಚಿಕೊಂಡರು.

ಈ ವೇಳೆ ಮಾತನಾಡಿದ ಅವರು, ತಮ್ಮ ಆರೋಗ್ಯದ ಬಗ್ಗೆ ಹೇಳಿಕೊಂಡಿದ್ದಾರೆ. ಈ ಹಿಂದೆ ತನಗೆ ಆರೋಗ್ಯ ಸಮಸ್ಯೆಯಿದೆ ಎಂದು ಶಿವಣ್ಣ ಹೇಳಿಕೊಂಡಿದ್ದರು. ಅದಲ್ಲದೆ ಚಿಕಿತ್ಸೆ ಸಲುವಾಗಿ ಡಿಸೆಂಬರ್‌ ತಿಂಗಳಿನಲ್ಲಿ ವಿದೇಶಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿದ್ದರು.

ಇದೀಗ ಆರೋಗ್ಯ ಸಂಬಂಧ ಅಪ್‌ಡೇಟ್ ನೀಡಿದ ಅವರು ಸದ್ಯ ಆರೋಗ್ಯ ಸುಧಾರಣೆ ಆಗಿದೆ. ಮುಂದಿನ ತಿಂಗಳು ಆಪರೇಷನ್ ಇದೆ. ಯುಎಸ್‌ಎಗೆ ಹೋಗುತ್ತಿದ್ದೇನೆ ಎಂದು ಮಾಹಿತಿ ನೀಡಿದರು.

ಶಿವರಾಜ್ ಕುಮಾರ್ ಅವರು ಶಿವಮೊಗ್ಗಕ್ಕೆ ಭೇಟಿಗೆ ಅಭಿಮಾನಿಗಳು ಕುಣಿಸು ಕುಪ್ಪಳಿಸಿದ್ದಾರೆ.  ಇನ್ನೂ ಶಿವರಾಜ್ ಕುಮಾರ್ ದಂಪತಿ ಗೋಪಿ ಸರ್ಕಲ್‌ಗೆ ಬರುತ್ತಲೇ ಅಭಿಮಾನಿಗಳು ಘೋಷಣೆಯನ್ನು ಕೂಗಿದರು. ಚಿತ್ರತಂಡದ ಜೊತೆ ಫ್ಯಾನ್ಸ್ಗಳಿಗೆ ಧನ್ಯವಾದ ತಿಳಿಸಿದ ಶಿವರಾಜ್ ಕುಮಾರ್ ಅಭಿಮಾನಿಗಳ ಅಭಿಮಾನಕ್ಕೆ ಫಿದಾ ಆದರು.

Share this Story:

Follow Webdunia kannada

ಮುಂದಿನ ಸುದ್ದಿ

ಕೆಲಸಕ್ಕೆ ಬ್ರೇಕ್ ನೀಡಿ ಸ್ನೇಹಿತರ ಜತೆ ಸ್ಕೂಬಾ ಡೈವಿಂಗ್‌ ಮಾಡಿದ ಡಾಲಿ ಧನಂಜಯ್‌