Select Your Language

Notifications

webdunia
webdunia
webdunia
webdunia

Shridhar Nayak: ಶ್ರೀಧರ್ ನಾಯಕ್ ಗೆ ಏಡ್ಸ್ ಬಂದಿತ್ತು: ಪತ್ನಿಯ ಹಳೇ ಹೇಳಿಕೆ ವೈರಲ್

Shridhar Nayak

Krishnaveni K

ಬೆಂಗಳೂರು , ಮಂಗಳವಾರ, 27 ಮೇ 2025 (14:49 IST)
Photo Credit: X
ಬೆಂಗಳೂರು: ಇಂದು ನಿಧನರಾದ ಕನ್ನಡ ಕಿರುತೆರೆ ನಟ ಶ್ರೀಧರ್ ನಾಯಕ್ ಗೆ ಹುಡುಗಿಯರ ಸಹವಾಸವಿತ್ತು. ಏಡ್ಸ್ ಖಾಯಿಲೆ ಬಂದಿತ್ತು ಎಂಬ ಅವರ ಪತ್ನಿ ಜ್ಯೀತಿ ಅವರ ಹಳೆಯ ಅಡಿಯೋ ವೈರಲ್ ಆಗಿದೆ.

ಶ್ರೀಧರ್ ಮತ್ತು ನಾನು ಪ್ರೀತಿಸಿ ಮದುವೆಯಾದವರು. ನಮ್ಮ ಜಾತಕ ಕೂಡಿಬರಲಿಲ್ಲ. ಹೀಗಾಗಿ ಮನೆಯಲ್ಲಿ ಒಪ್ಪಿರಲಿಲ್ಲ. ಆದರೂ ನಮ್ಮ ಸ್ನೇಹಿತರ ಸಹಾಯದಿಂದ ಮದುವೆಯಾದೆವು. ಆದರೆ ಮದುವೆಯಾದ ಒಂದೇ ತಿಂಗಳಿಗೆ ಅವರ ವರ್ತನೆ ಬದಲಾಯಿತು.

ಪ್ರತಿಯೊಂದಕ್ಕೆ ನಿರ್ಬಂಧ ಹೇರುತ್ತಿದ್ದ. ಹೀಗೇ ಇರಬೇಕು ಎಂದು ನಿರ್ಬಂಧವಿರುತ್ತಿತ್ತು. ಎಲ್ಲಾ ಸಹಜವಾಗಿಲ್ಲ ಎಂದು ನನಗೆ ಅರ್ಥವಾಯಿತು. ಆದರೆ ಅವನು ಈಗ ನನ್ನ ಬಗ್ಗೆ ಮಾಡುತ್ತಿರುವ ಆರೋಪಗಳೆಲ್ಲಾ ಸುಳ್ಳು.

ಕೊನೆಗೊಂದು ದಿನ ನನ್ನಲ್ಲಿ ಹೇಳಿದ್ದ, ನಿನ್ನ ಮೇಲೆ ನನಗೆ ಯಾವುದೇ ಪ್ರೀತಿ ಇಲ್ಲ. ಮದುವೆ ಮಾಡಿಕೊಳ್ಳಬೇಕಿತ್ತು, ಅದಕ್ಕೇ ನಿನ್ನ ಮದುವೆಯಾದೆ ಎಂದ. ಅವನು ನನಗೆ ಹೊಡೆದಾಗಲೂ ನಾನು ಯಾರಿಗೂ ಹೇಳದೇ ಕಾಲೇಜಿಗೆ ಹೋಗಿ ಮಕ್ಕಳಿಗೆ ಪಾಠ ಮಾಡಿದ್ದು ಇದೆ. ಗರ್ಭಿಣಿಯಾಗಿದ್ದಾಗ ಮತ್ತು ಮಗು ಆದ ಮೇಲೆ ಮೂರು ವರ್ಷ ಬಿಟ್ಟರೆ ಉಳಿದೆಲ್ಲಾ ಸಮಯದಲ್ಲಿ ನಾನು ಕೆಲಸ ಮಾಡುತ್ತಲೇ ಇದ್ದೆ. ನಾನು ಅವಳಿಗೆ ಓದಿಸಿದೆ, ಕೆಲಸ ಕೊಡಿಸಿದೆ ಅಂತೆಲ್ಲಾ ಈಗ ಹರಿದಾಡುತ್ತಿರುವ ವಿಡಿಯೋದಲ್ಲಿ ಹೇಳಿಕೊಳ್ಳುತ್ತಿದ್ದಾನೆ. ಆದರೆ ನನಗೆ ಅವನು ಓದಿಸಿಲ್ಲ. ನಾನು ಯಾರನ್ನೋ ಕಟ್ಟಿಕೊಂಡು ಓಡಿ ಹೋಗಿದ್ದೇನೆ ಎಂದು ಹೇಳಿಕೊಂಡು ಬರ್ತಾ ಇದ್ದೇನೆ. ನನ್ನ ಜೀವನದಲ್ಲಿ ಯಾರೂ ಇಲ್ಲ, ನನ್ನ ಮಗನ ಜೊತೆ ನಾನು ಹೊರಗೆ ಬಂದೆ ಎಂದಿದ್ದಾರೆ.

ಈವತ್ತಿನವರೆಗೂ ನಾನು ಅವನ ಕೆಟ್ಟ ಅಭ್ಯಾಸದ ಬಗ್ಗೆ ಹೇಳಿಕೊಂಡಿಲ್ಲ. ಈ ಅಭ್ಯಾಸ ಯಾವಾಗ ಬಂತೋ ಗೊತ್ತಿಲ್ಲ. ಅವನಿಗೆ ಎಚ್ಐವಿ ಬಂದಿದೆ. ಇದು ಮಲ್ಟಿಪಲ್ ಪಾರ್ಟನರ್ ಜೊತೆ ಲೈಂಗಿಕ ಸಂಬಂಧವಿಟ್ಟುಕೊಂಡಾಗಲೇ ಈ ಖಾಯಿಲೆ ಬರೋದು. ಇದನ್ನು ಗುಣಪಡಿಸಲು ಸಾಧ್ಯವೇ ಎಂದು ನಾನು ವೈದ್ಯರಲ್ಲೂ ಕೇಳಿದ್ದೆ. ಅವನ ವರ್ತನೆ, ಅಹಂಕಾರದಿಂದ ದೇವರು ಕೊಟ್ಟ ಎಲ್ಲವನ್ನೂ ಕಳೆದುಕೊಂಡ. ಅವನಿಗೆ ಬಂದ ಖಾಯಿಲೆಗೂ ಅವನೇ ಕಾರಣವೇ ಹೊರತು, ನಾನು ಆಗಲೀ ನನ್ನ ಮಗನಾಗಲೀ ಕಾರಣ ಅಲ್ಲ ಎಂದು ಹೇಳಿಕೆ ನೀಡಿದ್ದರು. ಇದು ಈ ಹಿಂದೆ ಶ್ರೀಧರ್ ತಮ್ಮ ಪತ್ನಿ ಬಗ್ಗೆ ಆರೋಪ ಮಾಡಿದ್ದಾಗ ನೀಡಿದ್ದ ಪ್ರತಿಕ್ರಿಯೆಯಾಗಿತ್ತು. ಈ ಹೇಳಿಕೆ ಈಗ ವೈರಲ್ ಆಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

Madenur Manu: ಸಿನಿಮಾ, ಕಿರುತೆರೆ ಎರಡರಿಂದ ಮಡೆನೂರು ಮನುಗೆ ನಿಷೇಧ