Select Your Language

Notifications

webdunia
webdunia
webdunia
webdunia

Madenooru Manu: ರೇಪ್‌ಕೇಸ್‌ನಲ್ಲಿ ಜೈಲು ಸೇರಿದ ನಟ ಮಡೆನೂರು ನಟ

ರೇಪ್ ಕೇಸ್

Sampriya

ಬೆಂಗಳೂರು , ಸೋಮವಾರ, 26 ಮೇ 2025 (15:30 IST)
ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಬಂಧಿಯಾಗಿರುವ ನಟ ಮಡೆನೂರು ಮನುಗೆ ಕೋರ್ಟ್‌ 14 ದಿನಗಳ ಕಾಲ ನ್ಯಾಯಾಂಗ ಬಂಧನ ಒಪ್ಪಿಸುವ ಮೂಲಕ ಜೈಲು ಪಾಲಾಗಿದ್ದಾರೆ.

5 ದಿನಗಳ ಪೊಲಿಸ್‌ ಕಸ್ಟಡಿ ಮುಗಿದ ಹಿನ್ನೆಲೆಯಲ್ಲಿ ಇಂದು ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೊಲೀಸರು ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮಲ್ಲತ್ತಹಳ್ಳಿಯಲ್ಲಿ ಮನುಗೆ ಮೆಡಿಕಲ್ ಟೆಸ್ಟ್ ಮಾಡಿಸಿದರು.

ಮೆಡಿಕಲ್‌ ಟೆಸ್ಟ್‌ ನಡೆದ ಬಳಿಕ ಪೊಲೀಸರು ಮಧ್ಯಾಹ್ನ 3ನೇ ಎಸಿಎಂಎಂ ಕೋರ್ಟ್‌ಗೆ ಹಾಜರು ಪಡಿಸಿದರು. ಈ ವೇಳೆ ನ್ಯಾಯಾಧೀಶರು ಮನು ಪರ ವಕೀಲರಿಗೆ ಕೆಲ ಪ್ರಶ್ನೆಯನ್ನು ಮುಂದಿಟ್ಟರು.

ಈ ಪ್ರಶ್ನೆಗೆ, ನನ್ನ ಕಕ್ಷಿದಾರರು ರಿಯಾಲಿಟಿ ಶೋನಲ್ಲಿ ಅಭಿನಯಿಸಿದ್ದಾರೆ. ಮದುವೆಯಾಗಿದೆ, ಆದರೆ ದೂರುದಾರೆ ಬೇರೆಯವರು ಎಂದು ಉತ್ತರ ನೀಡಿದರು.

ದೂರುದಾರೆಗೆ ಮದುವೆ ಆಗಿದ್ಯಾ ಎಂದು ಕೇಳಿದ್ದಕ್ಕೆ ಸಂತ್ರಸ್ತೆಯ ಪರ ವಕೀಲೆ ಮೊಬೈಲ್‌ನಲ್ಲಿರುವ ಕೆಲ ವಿಡಿಯೋವನ್ನು ನ್ಯಾಯಾಲಯಕ್ಕೆ ನೀಡಿದರು. ಅಂತಿಮವಾಗಿ ಕೋರ್ಟ್‌ 14 ದಿನಗಳ ಕಾಲ ಮನುವನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.


Share this Story:

Follow Webdunia kannada

ಮುಂದಿನ ಸುದ್ದಿ

Madenur Manu: ಮಡೆನೂರು ಮನು ಹೇಳಿದ್ದು ನಿಜವೇ ಆದರೆ.. ರೊಚ್ಚಿಗೆದ್ದ ಡಿಬಾಸ್ ಫ್ಯಾನ್ಸ್