Select Your Language

Notifications

webdunia
webdunia
webdunia
webdunia

Madenur Manu: ಗಂಡನ ಮೇಲೆ ಬಂದಿರುವ ರೇಪ್ ಕೇಸ್ ಬಗ್ಗೆ ಮಡೆನೂರು ಮನು ಪತ್ನಿ ಶಾಕಿಂಗ್ ಹೇಳಿಕೆ

Madenur Manu wife

Krishnaveni K

ಬೆಂಗಳೂರು , ಶುಕ್ರವಾರ, 23 ಮೇ 2025 (14:59 IST)
ಬೆಂಗಳೂರು: ರೇಪ್ ಕೇಸ್ ಆಗಿದ್ದರೂ ಮಡೆನೂರ್ ಮನು ಪತ್ನಿ ಮಾತ್ರ ಗಂಡನ ಕೈ ಬಿಟ್ಟಿಲ್ಲ. ಗಂಡನ ಮೇಲೆ ಬಂದಿರುವ ಅಪವಾದದ ಬಗ್ಗೆ ಪತ್ನಿ ಇಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ.

ಮರೆನೂರು ಮನು ನಾಯಕರಾಗಿರುವ ಕುಲದಲ್ಲಿ ಕೀಳ್ಯಾವುದೋ ಸಿನಿಮಾ ಇಂದು ಬಿಡುಗಡೆಯಾಗಿದೆ. ಈ ಸಿನಿಮಾ ಹಿಂದಿನ ದಿನವೇ ಮಡೆನೂರು ಮನು ಸಹ ನಟಿ ಮೇಲೆ ಅತ್ಯಾಚಾರ, ಬಲವಂತದಿಂದ ತಾಳಿ ಕಟ್ಟಿದ್ದಲ್ಲದೆ ಗರ್ಭಪಾತ ಮಾಡಿಸಿದ ಆರೋಪದಲ್ಲಿ ಅರೆಸ್ಟ್ ಆಗಿದ್ದಾರೆ.


ಇಂದು ಚಿತ್ರತಂಡದ ಜೊತೆ ಸಿನಿಮಾ ರಿಲೀಸ್ ಗೆ ಬಂದ ಮಡೆನೂರು ಮನು ಪತ್ನಿ, ಇದೆಲ್ಲಾ ನನ್ನ ಗಂಡನ ವಿರುದ್ಧ ನಡೆದ ಷಡ್ಯಂತ್ರ ಎಂದಿದ್ದಾರೆ. ಇಲ್ಲಾಂದ್ರೆ ಯಾಕೆ ಸಾರ್ ಈಗ ಸಿನಿಮಾ ಬಿಡುಗಡೆ ಹಂತದಲ್ಲಿ ಈ ರೀತಿ ಆರೋಪ ಮಾಡ್ತಾರೆ? ಇದೆಲ್ಲಾ ಕಟ್ಟು ಕತೆ ಸಾರ್. ಆರು ತಿಂಗಳಿನಿಂದ ಕಷ್ಟಪಟ್ಟು ಬಾಡಿ ಬಿಲ್ಡ್ ಮಾಡಿ ಸಿನಿಮಾ ಮಾಡವ್ರೆ. ಮೊದಲಿನಂತೆ ನನ್ನ ಗಂಡನಿಗೆ ಸಪೋರ್ಟ್ ಮಾಡಿ. ಪ್ರೊಡ್ಯೂಸರ್ ಕಷ್ಟಕ್ಕೆ ಬೆಲೆ ಕೊಡಿ ಎಂದು ಮನವಿ ಮಾಡಿದ್ದಾರೆ. ಇನ್ನು ಗಂಡನ ಮೇಲೆ ಬಂದ ಅಪವಾದಗಳ ಬಗ್ಗೆ ಕೋರ್ಟ್ ನಲ್ಲಿ ದಾಖಲೆ ಸಮೇತ ಬಿಚ್ಚಿಡ್ತೀವಿ. ತನಿಖೆ ಆದ ಮೇಲೆ ಎಲ್ಲಾ ಗೊತ್ತಾಗುತ್ತದೆ ಎಂದಿದ್ದಾರೆ.

ಇನ್ನು ಇಬ್ಬರೂ ವಿಡಿಯೋ, ಅಡಿಯೋ ಬಿಡುಗಡೆ ಮಾಡಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಪತ್ನಿ, ಇದೆಲ್ಲಾ ಸ್ಕಿಟ್ ಗೋಸ್ಕರ ಏನೋ ರೆಕಾರ್ಡ್ ಮಾಡಿಕೊಂಡಿರ್ತಾರೆ. ಅದು ಬಿಟ್ಟು ಬೇರೆ ಏನೂ ಇಲ್ಲ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಥಿಯೇಟರ್‌ನಲ್ಲಿ ಗಂಡನನ್ನು ನೆನೆದು ಕಣ್ಣೀರು ಹಾಕಿದ ಮಡೆನೂರು ಮನು ಪತ್ನಿ, ಹೇಳಿದ್ದೇನು ಗೊತ್ತಾ