Select Your Language

Notifications

webdunia
webdunia
webdunia
webdunia

ಅಕ್ಕ ಐರಾಳನ್ನೇ ಫಾಲೋ ಮಾಡ್ತಿದ್ದಾನೆ ಜ್ಯೂನಿಯರ್ ರಾಕಿ ಬಾಯ್

ಯಥರ್ವ್ ಯಶ್
ಬೆಂಗಳೂರು , ಭಾನುವಾರ, 13 ಜೂನ್ 2021 (09:26 IST)
ಬೆಂಗಳೂರು: ಕೊರೋನಾದಿಂದ ಜನರು ಮಾನಸಿಕವಾಗಿ ಕುಗ್ಗಿಹೋಗಿರುವಾಗ ಅವರ ಮುಖದಲ್ಲಿ ನಗು ತರಿಸುವಂತಹ ಪಾಸಿಟಿವ್ ವಿಡಿಯೋಗಳನ್ನು ಪ್ರಕಟಿಸುವುದಾಗಿ ಹೇಳಿದ್ದ ನಟಿ ರಾಧಿಕಾ ಪಂಡಿತ್ ಈಗ ಅದೇ ಕೆಲಸ ಮಾಡುತ್ತಿದ್ದಾರೆ.


ಮೊನ್ನೆಯಷ್ಟೇ ಮಗಳು ಐರಾ ಆಗಷ್ಟೇ ಹೆಜ್ಜೆ ಹಾಕಲು ಕಲಿಯುತ್ತಿರುವ ವಿಡಿಯೋ ಪ್ರಕಟಿಸಿ ಫ್ಯಾನ್ಸ್ ಮುಖದಲ್ಲಿ ನಗು ತಂದಿದ್ದ ರಾಧಿಕಾ ಈಗ ಪುತ್ರ ಯಥರ್ವ್ ನ ಮುದ್ದಾದ ಕ್ಷಣವೊಂದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

ಮಗನಿಗೆ ಉಗುರು ಕತ್ತರಿಸುವ ವಿಡಿಯೋ ಪ್ರಕಟಿಸಿರುವ ರಾಧಿಕಾ ನೆಟ್ಟಿಗರಿಗೆ ಅವನ ತುಂಟಾಟ ತೋರಿಸಿ ಕಚಗುಳಿಯಿಟ್ಟಿದ್ದಾರೆ. ವಿಶೇಷವೆಂದರೆ ಕೆಲವು ಸಮಯದ ಹಿಂದೆ ಮಗಳು ಐರಾ ಕೂಡಾ ಇದೇ ರೀತಿ ಉಗುರು ಕಟ್ ಮಾಡಿಸಿಕೊಳ್ಳುತ್ತಿರುವ ವಿಡಿಯೋವನ್ನು ರಾಧಿಕಾ ಪ್ರಕಟಿಸಿದ್ದರು. ಈಗ ಯಥರ್ವ್ ಕೂಡಾ ಉಗುರು ಕತ್ತರಿಸಿಕೊಳ್ಳುವಾಗ ಅಮ್ಮನನ್ನು ಆಟವಾಡಿಸುತ್ತಾ ಅಕ್ಕನನ್ನೇ ಫಾಲೋ ಮಾಡ್ತಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಕನ್ನಡ 8 ಮತ್ತೆ ಶುರುವಾಗೋದು ಯಾವಾಗ ಗೊತ್ತಾ?