Publish Date: Sat, 12 Jun 2021 (10:08 IST)
Updated Date: Sat, 12 Jun 2021 (10:09 IST)
ಬೆಂಗಳೂರು: ನಟ, ನಿರೂಪಕ ಡ್ಯಾನಿಶ್ ಸೇಠ್ ಮೊನ್ನೆಯಷ್ಟೇ ತಮ್ಮ ಗೆಳತಿ ಅನ್ಯಾ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಅವರು ಈಗಲೂ ನಾನು ಸಿಂಗಲ್ ಎಂದಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಿಸ್ಟರ್ ನ್ಯಾಗ್ಸ್ ಈ ರೀತಿ ಹೇಳಿಕೆ ಕೊಟ್ಟಿದ್ದೇಕೆ ಅಂತೀರಾ? ಇದೂ ಕೂಡಾ ನ್ಯಾಗ್ಸ್ ಟ್ರಿಕ್ಸ್!
ನನ್ನ ಮದುವೆಯಾಗಿ ಎರಡು ದಿನಗಳಾಗಿದ್ದು, ನಿಮಗೆಲ್ಲಾ ಒಂದು ಸ್ಪಷ್ಟನೆ ನೀಡಲು ಬಯಸುತ್ತೇನೆ. ಮಿಸ್ಟರ್ ನ್ಯಾಗ್ಸ್ ಈಗಲೂ ಸೆಲ್ವಲಕ್ಷ್ಮಿ ಜೊತೆಗಿದ್ದಾನೆ. ಗೋಪಿ ಈಗಲೂ ಸಿಂಗಲ್. ಧನ್ಯವಾದಗಳು ಎಂದು ತಮ್ಮ ಎಂದಿನ ಹಾಸ್ಯ ಶೈಲಿಯಲ್ಲೇ ಡ್ಯಾನಿಶ್ ಸ್ಪಷ್ಟನೆ ನೀಡಿದ್ದಾರೆ.