Publish Date: Sat, 12 Jun 2021 (09:48 IST)
Updated Date: Sat, 12 Jun 2021 (09:50 IST)
ಬೆಂಗಳೂರು: ಇಂದು ಜನ್ಮ ದಿನ ಆಚರಿಸಿಕೊಳ್ಳುತ್ತಿರುವ ಡಾರ್ಲಿಂಗ್ ಕೃಷ್ಣಗೆ ಪತ್ನಿ, ನಟಿ ಮಿಲನಾ ನಾಗರಾಜ್ ಸ್ಪೆಷಲ್ ಆಗಿ ವಿಶ್ ಮಾಡಿದ್ದಾರೆ.
ಡಾರ್ಲಿಂಗ್ ಕೃಷ್ಣ ಜೊತೆಗೆ ಕಡಲ ತೀರದಲ್ಲಿರುವ ವಿಶೇಷ ವಿಡಿಯೋವನ್ನು ಪ್ರಕಟಿಸಿರುವ ಮಿಲನಾ, ನನ್ನ ಹಾಗೆ ನಿನಗೆ ಒಳ್ಳೆಯದೇ ಆಗಲಿ ಅಂತ ವಿಶ್ ಮಾಡೋರು ಯಾರೂ ಇಲ್ಲ ಎಂದು ಲೈಟಾಗಿ ಗಂಡನ ಕಾಲೆಳೆದಿದ್ದಾರೆ.
ಇನ್ನು, ಡಾರ್ಲಿಂಗ್ ಕೃಷ್ಣ ಬರ್ತ್ ಡೇಗೆ ಲವ್ ಮಾಕ್ಟೇಲ್ 2 ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ಅದಲ್ಲದೆ, ಶುಗರ್ ಫ್ಯಾಕ್ಟರಿ ಚಿತ್ರತಂಡ ಇಂದು ಟೀಸರ್ ಕೂಡಾ ಲಾಂಚ್ ಮಾಡುತ್ತಿದೆ.