ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾದಲ್ಲಿ ಪಾತ್ರ ಮಾಡಿರುವ ನಟ ರವಿಶಂಕರ್ ಗೌಡ ಸಿನಿಮಾ ಬಗ್ಗೆ ಹೇಳಿದ ಮಾತು ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.
ವಿಕ್ರಾಂತ್ ರೋಣ ಸಿನಿಮಾದ ಡಬ್ಬಿಂಗ್ ಮುಗಿಸಿದ ರವಿಶಂಕರ್ ಗೌಡ, ಈ ಸಿನಿಮಾ ನೋಡುವಾಗಲೇ ಥ್ರಿಲ್ ಆಗುತ್ತದೆ ಎಂದು ಹಾಡಿಹೊಗಳಿದ್ದಾರೆ.
ಸಿನಿಮಾ ಪ್ರಾರಂಭವಾದಾಗಿನಿಂದ ಕೊನೆಯವರೆಗೂ ಸೀಟಿನಲ್ಲಿ ಒರಗಿಕೊಳ್ಳಲು ಸಾಧ‍್ಯವಾಗಿಲ್ಲ, ಕುತೂಹಲದ ಮಹಾಪೂರ. ಗೆಳೆಯ ದೀಪುವಿನ ಅಭಿನಯಕ್ಕೆ ಮನಸೋಲದವರಿಲ್ಲ. ಹೊಸ ಕಲಾವಿದರಾದರು ಅಚ್ಚುಕಟ್ಟಾದ ಅಭಿನಯ. ಅಭಿನಂದನೆಗಳು ನಿರ್ದೇಶಕ ಅನೂಪ್ ಭಂಡಾರಿ ಮತ್ತು ಜ್ಯಾಕ್ ಮಂಜು ಅವರಿಗೆ ಎಂದು ರವಿಶಂಕರ್ ಗೌಡ ಹೇಳಿಕೊಂಡಿದ್ದಾರೆ.