Publish Date: Sat, 12 Jun 2021 (10:24 IST)
Updated Date: Sat, 12 Jun 2021 (10:25 IST)
ಬೆಂಗಳೂರು: ಕೊರೋನಾ ಮಹಾಮಾರಿ ಕೇವಲ ವ್ಯಾಪಾರಿಗಳು, ಉದ್ಯೋಗಸ್ಥರನ್ನು ಮಾತ್ರ ದಿವಾಳಿಯನ್ನಾಗಿ ಮಾಡಿಲ್ಲ. ರೈತನೂ ಕಷ್ಟದಲ್ಲಿದ್ದಾನೆ. ಇಂತಹ ರೈತರಿಗೆ ನೆರವಾಗಲು ಇದೀಗ ನಟಿ ರಚಿತಾ ರಾಮ್ ಮುಂದಾಗಿದ್ದಾರೆ. ಜೊತೆಗೆ ತಮ್ಮ ಅಭಿಮಾನಿಗಳಿಗೂ ಕೈ ಜೋಡಿಸಲು ಹೇಳಿದ್ದಾರೆ.
ಕೊರೋನಾ ಕಾಲದಲ್ಲಿ ಬೆಳೆದ ಬೆಳೆ ಮಾರಲಾಗದೇ ನಷ್ಟ ಅನುಭವಿಸುತ್ತಿರುವ ಅನ್ನದಾತರಿಗೆ ನನ್ನ ಬೆಂಬಲ ಎಂದಿರುವ ರಚಿತಾ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.
ಹಸಿದವರಿಗೆ ಅನ್ನ ನೀಡುವ ಅನ್ನದಾತ ನಮ್ಮ ಬೆನ್ನುಲುಬು. ಆತನ ಬೆನ್ನಿಗೆ ನಾವೆಲ್ಲರೂ ನಿಲ್ಲುವುದು ಅವಶ್ಯವಾಗಿದೆ. ಹೀಗಾಗಿ ಈ ದಿನಗಳಲ್ಲಿ ಕೊರೋನಾ ಸೋಂಕಿತ ರೈತರಿಗೆ ನಮ್ಮ ಕೈಲಾದ ಮಟ್ಟಿಗೆ ನೆರವಾಗುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ವಿ ಸಪೋರ್ಟ್ ಫಾರ್ಮರ್ಸ್ ಸಂಘಟನೆಗೆ ನನ್ನ ಬೆಂಬಲವಿದೆ. ನಿಮ್ಮ ಬೆಂಬಲ ವ್ಯಕ್ತಪಡಿಸಲು ನಿಮ್ಮ ಕೈಲಾದಷ್ಟು ಯುಪಿಐ ಕೋಡ್ ಮೂಲಕ ಸಹಾಯ ಮಾಡಿ ಎಂದು ರಚಿತಾ ಮನವಿ ಮಾಡಿದ್ದಾರೆ.