Select Your Language

Notifications

webdunia
webdunia
webdunia
webdunia

ಅಬ್‌ರಾಮ್ ಜೊತೆ ಅಭಿನಯಿಸಲು ಇಷ್ಟ: ದೀಪಿಕಾ ಪಡುಕೋಣೆ

deepika padukone
mumbai , ಸೋಮವಾರ, 6 ನವೆಂಬರ್ 2023 (12:52 IST)
ಶಾರುಕ್ ಖಾನ್ ಪುತ್ರ ಅಬ್ ರಾಮ್  ಬಾಲಿವುಡ್‌ಗೆ ಎಂಟ್ರಿ ಆಗಿರುವುದು ಎಲ್ಲರಿಂದ ಪ್ರಶಂಸೆ ಸಿಕ್ಕಿದೆ. ಆದರೆ ದೀಪಿಕ ಪಡುಕೋಣೆ ನೀಡಿರುವ ಹೊಗಳಿಕೆ ಮಾತ್ರ ಶಾರುಖ್ ಅವರನ್ನು ಹೆಚ್ಚು ಆಕರ್ಷಿಸಿದೆ. ಈ ಚಿತ್ರದಲ್ಲಿ ಅಬ್‌ರಾಮ್ ಮುದ್ದುಮುದ್ದಾಗಿದ್ದಾನೆ. ತನ್ನ ಮುಂದಿನ ಚಿತ್ರದಲ್ಲಿ ತಾನು ಅಬ್‌ರಾಮ್   ಜೊತೆ ಅಭಿನಯಿಸಲು ಇಷ್ಟ ಪಡುತ್ತೇನೆ ಎಂದು ಹೇಳಿದ್ದಾಳೆ. ಇದನ್ನುಶಾರುಖ್ ಖಾನ್ ತಿಳಿಸಿದ್ದಾರೆ. 
 
ಬಾಲಿವುಡ್ ನಲ್ಲಿ ಶಾರುಖ್ ಖಾನ್  ಹಾಗೂ ದೀಪಿಕಾ ಪಡುಕೋಣೆ  ಅವರು ಅಭಿನಯಿಸಿರುವ ಹ್ಯಾಪಿ ನ್ಯೂ ಇಯರ್. ಈ ಚಿತ್ರ ಮುಗಿದಾಗ ಬರುವ ಟೈಟಲ್‌ನಲ್ಲಿ  ಶಾರುಖ್ ಖಾನ್ ಅವರ ಮೂರನೇ ಮಗ ಅಬ್ ರಾಮ್ ಎಂಟ್ರಿ ಆಗಿರುವುದು ಎಲ್ಲರ ಗಮನ ಸೆಳೆದಿದೆ. 
 
ಮಕ್ಕಳ ಜೊತೆ ಸೇರಿ ಆಡೋಕೆ ಇಷ್ಟ. ತನ್ನ ಮಗ ಆರ್ಯನ್ ಜೊತೆ ಸೇರಿ ವೀಡಿಯೋ ಗೇಂ ಅಲ್ಲದೆ ಫುಟ್ ಬಾಲ್, ಕ್ರಿಕೆಟ್, ಆಡುತ್ತೇವೆ ಎಂದು  ಹೇಳಿದ್ದಾರೆ ಶಾರುಖ್. ಸುಮಾರು 6  ಸಾವಿರ ಥಿಯೇಟರ್ ನಲ್ಲಿ ಬಿಡುಗಡೆಯಾದ ಈ ಚಿತ್ರವು ವಿಶ್ವವ್ಯಾಪಿಯಾಗಿ ಒಂದು ವಾರದೊಳಗೆ 100  ಕೋಟಿ ರೂಪಾಯಿಗಳನ್ನು ವಸೂಲಿ ಮಾಡಿ ರೆಕಾರ್ಡ್ ಮಾಡಿದೆ. 
 
ಹೃತಿಕ್ ರೋಶನ್ ಅವರ ಬ್ಯಾಂಗ್ ಬ್ಯಾಂಗ್ ಚಿತ್ರ ಐದು ದಿನದಲ್ಲಿ 100  ಕೋಟಿ ತಲುಪಿದರೆ, ಹ್ಯಾಪಿ ನ್ಯೂ ಇಯರ್ ಮೂರು ದಿನದಲ್ಲೇ ಗಳಿಕೆ ಮಾಡಿ ಎಲ್ಲರಲ್ಲೂ ಅಚ್ಚರಿ ಉಂಟು ಮಾಡಿತ್ತು. ಈ ಚಿತ್ರವನ್ನು ಫರಾ ಖಾನ್ ನಿರ್ದೇಶಿಸಿದ್ದಾರೆ. ಅಭಿಷೇಕ್ ಬಚ್ಚನ್ ,ಸೋನು ಸೂದ್ ಮುಂತಾದವರು ನಟಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಕಂಗನಾ ರನೌತ್ ಜೀವನದ ಸಿಕ್ರೇಟ್ ಬಹಿರಂಗ