ಕಂಗನ ತಾಯಿ ತಂದೆ ಸಹ ಆಕೆಯನ್ನು ಭೇಟಿ ಮಾಡ ಬೇಕಾದರೆ ಅಪಾಯಿಂಟ್ ಮೆಂಟ್ ತೆಗೆದುಕೊಳ್ಳ ಬೇಕಂತೆ ಅಷ್ಟರಮಟ್ಟಿಗೆ ತನ್ನ ಬದುಕನ್ನು ಕ್ರಮಬದ್ಧವಾಗಿಟ್ಟುಕೊಂಡಿದ್ದಾಳೆ . ಈ ಸಂಗತಿ ಕೇಳಿದ ಅನೇಕ ಬಾಲಿವುಡ್ ಮಂದಿ ಆಶ್ಚರ್ಯಕರ ರೀತಿಯಲ್ಲಿ ಭಾವನೆಗಳನ್ನು ವ್ಯಕ್ತ ಪಡಿಸಿದ್ದಾರೆ.
ಬದುಕು ಬಂದಂತೆ ಸ್ವೀಕರಿಸುವ ಗುಣ ನನ್ನದು. ನಾನು ಪ್ರತಿಯೊಂದು ಕೆಲಸವನ್ನು ಯೋಜನಾ ಬದ್ಧವಾಗಿ ಮಾಡುತ್ತೇನೆ. ಒಂದೇ ಬಾರಿ ನಾಲ್ಕೈದು ಕೆಲಸಗಳನ್ನು ಮಾಡುವ ಹುಚ್ಚುತನಕ್ಕೆ ಹೋಗುವುದಿಲ್ಲ. ಆದಷ್ಟು ಪ್ರಶಾಂತವಾಗಿ ಇರಬೇಕು ಎನ್ನುವುದಕ್ಕೆ ಆದ್ಯತೆ ನೀಡುತ್ತೇನೆ. ಯಾವುದೇ ಆಗಿರಲಿ ಸಮಯಕ್ಕೆ ಸರಿಯಾಗಿ ಪೂರೈಸ ಬೇಕು ಎನ್ನುವ ಮನೋ ಭಾವ ಹೊಂದಿದ್ದೇನೆ ಎಂದು ಹೇಳಿದ್ದಾಳೆ ಕಂಗನ ರನೌತ್.
ಆದರೆ ಅದರ ಬಗ್ಗೆ ತನಗೆ ಯಾವುದೇ ಬಗೆಯ ಬೇಸರ ಇಲ್ಲ ಎಂದು ಹೇಳಿದ್ದಾಳೆ ಆಕೆ. ನನ್ನ ಈ ವರ್ತನೆ ಕಂಡು ಬೇರೆಯವರಿಗೆ ಈಕೆಗೆ ತಲೆಕೆಟ್ಟಿದೆ ಎಂದು ಅನ್ನಿಸಬಹುದು. ಆದರೆ ಅದರ ಬಗ್ಗೆ ನನಗೆ ಯಾವುದೇ ರೀತಿಯಲ್ಲೂ ಬೇಸರ ಇಲ್ಲ. ನನ್ನ ಪದ್ಧತಿ ಸರಿ ಎಂದು ನಾನು ತಿಳಿದಿದ್ದೇನೆ ಎಂದಿದ್ದಾರೆ.
ನನ್ನ ಸ್ನೇಹಿತರು ಇರುವಾಗ ಅಪ್ಪ ಅಮ್ಮ ಬಂದರೆ ಆಗ ಅವರು ಏನು ಮಾತನಾಡಬೇಕೋ ಗೊತ್ತಾಗದು. ಸರಿ ಎಲ್ಲರ ಜೊತೆ ಮಾತಾಡುತ್ತಾ ಕೂರೋಣ ಎಂದುಕೊಂಡರೆ ಅಪ್ಪ ಅಮ್ಮನ ಜೊತೆ ಮಾತನಾಡುವ ಸಂಗತಿ ಫ್ರೆಂಡ್ಸ್ ಜೊತೆ ಆಗದು. ಸ್ನೇಹಿತರ ಬಳಿ ಹೇಳುವಂತಹದ್ದು ತಾಯಿತಂದೆ ಬಳಿ ಹೇಳಲಾಗದು. ಆದ್ದರಿಂದ ನನ್ನ ಅಮ್ಮ ಅಪ್ಪ ಬರುವ ಮುನ್ನ ಫ್ರೀ ಇದ್ದೀಯ ಎಂದು ಮೆಸೇಜ್ ಹಾಕುತ್ತಾರೆ. ನಾನು ಓಕೆ ಅಂದರೆ ಬರುತ್ತಾರೆ. ಇಲ್ಲವೆಂದರೆ ಬರುವುದಿಲ್ಲ ಎಂದು ಹೇಳಿದ್ದಾಳೆ ಈ ಚೆಲುವೆ.