Select Your Language

Notifications

webdunia
webdunia
webdunia
webdunia

ಅನಿರುದ್ಧ್ ಜತ್ಕಾರ್ ಗೆ ಸಿಕ್ಕ ಹೊಸ ನಾಯಕಿ ಯಾರು ಗೊತ್ತೇ?

ಅನಿರುದ್ಧ್ ಜತ್ಕಾರ್ ಗೆ ಸಿಕ್ಕ ಹೊಸ ನಾಯಕಿ ಯಾರು ಗೊತ್ತೇ?
ಬೆಂಗಳೂರು , ಶನಿವಾರ, 7 ಜನವರಿ 2023 (08:40 IST)
WD
ಬೆಂಗಳೂರು: ನಟ ಅನಿರುದ್ಧ್ ಜತ್ಕಾರ್ ಜೊತೆ ಜೊತೆಯಲಿ ಧಾರವಾಹಿಯಿಂದ ಹೊರಬಂದ ಬಳಿಕ ಇದೀಗ ಉದಯ ವಾಹಿನಿಗಾಗಿ ನಿರ್ಮಾಣವಾಗಲಿರುವ ಸೂರ್ಯವಂಶ ಧಾರವಾಹಿಯಲ್ಲಿ ನಟಿಸಲಿದ್ದಾರೆ.

ಸಾಹಸಸಿಂಹ ಡಾ. ವಿಷ್ಣುವರ್ಧನ್ ನಾಯಕರಾಗಿದ್ದ ಎಸ್. ನಾರಾಯಣ್ ನಿರ್ದೇಶನದ ಸೂರ್ಯವಂಶ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈಗ ಅದೇ ಟೈಟಲ್ ಇಟ್ಟುಕೊಂಡು ನಾರಾಯಣ್, ವಿಷ್ಣು ಅಳಿಯ ಅನಿರುದ್ಧ್ ನಾಯಕರಾಗಿ ಧಾರವಾಹಿ ನಿರ್ದೇಶನ ಮಾಡಲಿದ್ದಾರೆ. ಇದು ಸದ್ಯದಲ್ಲೇ ಉದಯ ವಾಹಿನಿಯಲ್ಲಿ ಪ್ರಸಾರವಾಗಲಿದೆ.

webdunia
Photo Courtesy: facebook
ಈ ಧಾರವಾಹಿಯಲ್ಲಿ ಅನಿರುದ್ಧ್ ಗೆ ನಾಯಕಿಯಾಗಿ ಕನ್ನಡ, ತೆಲುಗು, ಮಲಯಾಳಂ ಕಿರುತೆರೆಯ ಜನಪ್ರಿಯ ನಟಿ ಪಲ್ಲವಿ ಗೌಡ ಅಭಿನಯಿಸಲಿದ್ದಾರೆ. ಪಲ್ಲವಿ ಗೌಡ ಕನ್ನಡದಲ್ಲಿ ಜೋಡಿ ಹಕ್ಕಿ, ಸೇವಂತಿ ಸೇರಿದಂತೆ ಧಾರವಾಹಿ ಜೊತೆಗೆ ಕೊಡೆ ಮುರುಗ, ಕಿಡಿ ಮುಂತಾದ ಸಿನಿಮಾಗಳಲ್ಲೂ ನಾಯಕಿಯಾಗಿ ಅಭಿನಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದಳಪತಿ ವಿಜಯ್ ದಾಂಪತ್ಯದಲ್ಲಿ ಬಿರುಕು? ಡಿವೋರ್ಸ್ ವದಂತಿ