Select Your Language

Notifications

webdunia
webdunia
webdunia
Wednesday, 9 April 2025
webdunia

ಬಿಬಿಕೆ9: ದಿವ್ಯಾಗೆ ಅರವಿಂದ್ ನೋಡುವಾಸೆ, ದೀಪಿಕಾಗೆ ಶೈನ್ ಬರಬೇಕೆಂದು ಆಸೆ!

ಬಿಗ್ ಬಾಸ್ ಕನ್ನಡ 9
ಬೆಂಗಳೂರು , ಮಂಗಳವಾರ, 27 ಡಿಸೆಂಬರ್ 2022 (09:50 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 9 ರ ಫೈನಲ್ ವೀಕ್ ಗೆ ಬಂದಿದ್ದು, ಈ ವಾರ ಸ್ಪರ್ಧಿಗಳ ಆಸೆ ನೆರವೇರಿಸಲು ಬಿಗ್ ಬಾಸ್ ನಿರ್ಧರಿಸಿದೆ.

ಅದರಂತೆ ಸ್ಪರ್ಧಿಗಳು ತಮ್ಮ ಮೂರು ಆಸೆಯನ್ನು ಬಿಗ್ ಬಾಸ್ ಮುಂದೆ ಹೇಳಿಕೊಳ್ಳಲು ಹೇಳಿದೆ. ಅದರಲ್ಲಿ ಕೆಲವನ್ನಾದರೂ ಬಿಗ್ ಬಾಸ್ ಈ ವಾರ ಈಡೇರಿಸಲಿದೆ.

ಅದರಂತೆ ದೀಪಿಕಾ ದಾಸ್ ಈ ವಾರ ಮನೆಗೆ ತಮ್ಮ ಹಳೆಯ ಸೀಸನ್ ನ ಸ್ನೇಹಿತರಾದ ಶೈನ್ ಶೆಟ್ಟಿ, ವಾಸುಕಿ ವೈಭವ್, ಪ್ರಿಯಾಂಕ, ಕಿಶನ್ ಇವರಲ್ಲಿ ಯಾರಾದರೂ ಮನೆಗೆ ಬಂದರೆ ಚೆನ್ನಾಗಿರುತ್ತದೆ. ಅವರು ಬಂದರೆ ನನಗೆ ಸ್ಪೂರ್ತಿ ಸಿಗುತ್ತದೆ ಎಂದು ದೀಪಿಕಾ ಮನವಿ ಮಾಡಿದ್ದಾರೆ.

ಇನ್ನು ದಿವ್ಯಾ ಉರುಡುಗ ತಮ್ಮ ಸರದಿ ಬಂದಾಗ ತಮ್ಮ ಗೆಳೆಯ ಅರವಿಂದ್ ಕೆಪಿ ಮನೆಯೊಳಗೆ ಬರಬೇಕು ಎಂದು ಆಶಿಸಿದ್ದಾರೆ. ಕಳೆದ ಇಡೀ ಸೀಸನ್ ಅವರ ಜೊತೆ ಕಳೆದಿದ್ದಾನೆ. ಈ ಇಡೀ ಸೀಸನ್ ಅವರಿಲ್ಲದೇ ಕಳೆದಿದ್ದೇನೆ. ಹೀಗಾಗಿ ಈಗ ಅವರು ಮನೆಗೆ ಬಂದರೆ ಖುಷಿಯಾಗುತ್ತದೆ ಎಂದು ಆಸೆ ವ್ಯಕ್ತಪಡಿಸಿದ್ದಾರೆ. ಇವರ ಆಸೆಯನ್ನು ಬಿಗ್ ಬಾಸ್ ನೆರವೇರಿಸುತ್ತಾ ಕಾದು ನೋಡಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಮೇಲೆ ಹೊಸಪೇಟೆಯಲ್ಲಿ ಅಹಿತಕರ ಘಟನೆ- ಮೂವರು ಅರೆಸ್ಟ್, ನ್ಯಾಯಾಂಗ ಬಂಧನ