ಬೆಂಗಳೂರು: ಬಿಗ್ ಬಾಸ್ ಸೀಸನ್ 9 ರ ಸ್ಪರ್ಧಿ ಅರುಣ್ ಸಾಗರ್ ದಿಡೀರ್ ಆಗಿ ಮನೆಯಿಂದ ಹೊರಬಂದಿದ್ದಾರೆ. ಇದಕ್ಕೆ ಕಾರಣ ಅವರಿಗೆ ಮನೆಯಿಂದ ಬಂದ ಸುದ್ದಿ.
ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ಗಲ್ಲಕ್ಕೆ ಪೆಟ್ಟು ಮಾಡಿಕೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನಲೆಯಲ್ಲಿ ತಂದೆಯನ್ನು ನೋಡಬೇಕೆಂದು ಮಗಳು ಬಯಸಿದ್ದಾಳೆ ಎಂಬ ಸುದ್ದಿಯನ್ನು ಅರುಣ್ ಸಾಗರ್ ಗೆ ನೀಡಲಾಯಿತು. ಈ ಹಿನ್ನಲೆಯಲ್ಲಿ ಅವರು ದಿಡೀರ್ ಹೊರಬಂದಿದ್ದಾರೆ. ಅವರು ಮನೆಗೆ ವಾಪಸ್ ಬರುತ್ತಾರಾ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಬಿಗ್ ಬಾಸ್ ಮುಕ್ತಾಯವಾಗಲು ಇನ್ನು ಎರಡು ವಾರ ಬಾಕಿಯಿದೆ. ಹೀಗಾಗಿ ಅರುಣ್ ಸಾಗರ್ ಗೆ ಬಿಗ್ ಬಾಸ್ ಮತ್ತೊಂದು ಅವಕಾಶ ನೀಡಲಿದೆಯೇ ಎಂದು ಕಾದುನೋಡಬೇಕಿದೆ.