Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಪ್ರಶಾಂತ್ ಸಂಬರಗಿ

ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಪ್ರಶಾಂತ್ ಸಂಬರಗಿ
ಬೆಂಗಳೂರು , ಭಾನುವಾರ, 11 ಡಿಸೆಂಬರ್ 2022 (09:10 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 9 ರಿಂದ ಈ ವಾರ ಪ್ರಶಾಂತ್ ಸಂಬರಗಿ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ.

ಈ ವಾರ ಘಟಾನುಘಟಿಗಳೇ ನಾಮಿನೇಟ್ ಆಗಿದ್ದರು. ಆದರೆ ಅಮೂಲ್ಯ ಹೊರಹೋಗಬಹುದೇನೋ ಎಂಬ ಅನುಮಾವಿತ್ತು. ಅವರು ಈ ವಾರ ಕಳಪೆ ಹಣೆಪಟ್ಟಿಯನ್ನೂ ಹೊತ್ತುಕೊಂಡಿದ್ದರು. ಆದರೆ ಅಮೂಲ್ಯಗೆ ಜನ ಬೆಂಬಲ ಸಿಕ್ಕಿದ್ದು, ಮೂರನೇ ಸ್ಪರ್ಧಿಯಾಗಿ ಸೇವ್ ಆದರು.

 ಈ ವಾರ ರಾಕೇಶ್ ಅಡಿಗ ಕೈ ಗಾಯವನ್ನು ತಮಾಷೆ ಮಾಡಿದ್ದಕ್ಕೆ ಪ್ರಶಾಂತ್ ಸಂಬರಗಿಗೆ ಕಿಚ್ಚ ಕ್ಲಾಸ್ ತೆಗೆದುಕೊಂಡಿದ್ದರು. ಇದರ ಜೊತೆಗೆ ಕನ್ನಡ ಪರ ಹೋರಾಟಗಾರರ ಕುರಿತು ಪ್ರಶಾಂತ್ ನೀಡಿದ್ದ ಹೇಳಿಕೆಯ ಬಳಿಕ ಅವರ ವರ್ಚಸ್ಸಿಗೆ ಕೊಂಚ ಧಕ್ಕೆಯಾಗಿತ್ತು. ಇದೆಲ್ಲಾ ಕಾರಣಗಳಿಂದ ಈ ವಾರ ಕಡಿಮೆ ವೋಟ್ ಪಡೆದ ಪ್ರಶಾಂತ್ ಎಲಿಮಿನೇಟ್ ಆಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ಅನಿರುದ್ದ್ ನ್ನ ಕರೆದು ಮಾತನಾಡಿಸಿದ ನಿರ್ಮಾಪಕರ ಸಂಘ