ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 9 ರಲ್ಲಿ ಫೈನಲ್ ಸ್ಪರ್ಧಿಯಾಗಿದ್ದ ದಿವ್ಯಾ ಉರುಡುಗ ಸ್ಪರ್ಧೆ ಇಲ್ಲಿಗೆ ಕೊನೆಗೊಂಡಿದೆ. 
									
			
			 
 			
 
 			
			                     
							
							
			        							
								
																	ದಿವ್ಯಾ ಐದನೇ ಸ್ಪರ್ಧಿಯಾಗಿ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಇನ್ನೀಗ ಅಂತಿಮ ಪೈಪೋಟಿಗೆ ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ, ದೀಪಿಕಾ ದಾಸ್ ಉಳಿದುಕೊಂಡಿದ್ದಾರೆ. ಕೆಲವೊಂದು ಮೂಲಗಳ ಪ್ರಕಾರ ರೂಪೇಶ್ ರಾಜಣ್ಣ ನಾಲ್ಕನೇ ಸ್ಪರ್ಧಿಯಾಗಿದ್ದಾರೆ ಎನ್ನಲಾಗಿದೆ.
									
										
								
																	ಹೀಗಾಗಿ ಅಂತಿಮ ಹಣಾಹಣಿಗೆ ದೀಪಿಕಾ, ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ ನಡುವೆ ಪೈಪೋಟಿಯಿದೆ. ಅದರಲ್ಲೂ ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ ನಡುವೆ ತೀವ್ರ ಸ್ಪರ್ಧೆಯಿದ್ದು, ಇವರಲ್ಲಿ ಒಬ್ಬರು ವಿನ್ ಆಗಬಹುದು ಎನ್ನಲಾಗುತ್ತಿದೆ.