Publish Date: Wed, 28 Dec 2022 (09:00 IST)
Updated Date: Wed, 28 Dec 2022 (09:16 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 9 ರ ಫೈನಲ್ ವಾರದಲ್ಲಿ ನಿನ್ನೆ ಆರ್ಯವರ್ಧನ್ ಗುರೂಜಿ ಮಿಡ್ ವೀಕ್ ಎಲಿಮಿನೇಷನ್ ಆಗಿದ್ದಾರೆ. ಇದು ಅವರ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಆರ್ಯವರ್ಧನ್ ಮನೆಯಲ್ಲಿ ಒಂದು ರೀತಿಯಲ್ಲಿ ಭರ್ಜರಿ ಎಂಟರ್ ಟೈನ್ ಮೆಂಟ್ ಕೊಡುತ್ತಿದ್ದರು. ಅವರ ವರ್ತನೆ ನೋಡಗರಿಗೆ ನಗು, ಮನರಂಜನೆ ನೀಡುತ್ತಿತ್ತು. ಆದರೆ ಆರ್ಯವರ್ಧನ್ ಮನೆಯಿಂದ ಹೊರ ಹೋಗಿದ್ದು ಅವರನ್ನು ಇಷ್ಟಪಡುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ.
ಅವರಿದ್ದೀಗ ಮನೆಯಲ್ಲಿ ನಗುವಿತ್ತು. ಆದರೆ ಈಗ ನಗು ಕಡಿಮೆಯಾಗಲಿದೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಕೊನೆಯ ವಾರದವರೆಗೂ ಇದ್ದು ಕೊನೆಯ ಕ್ಷಣದಲ್ಲಿ ಎಲಿಮಿನೇಟ್ ಆಗಿದ್ದು ಸ್ವತಃ ಆರ್ಯವರ್ಧನ್ ಗೆ ಶಾಕ್ ಆಗಿತ್ತು.